ಮದ್ಯ ಪ್ರಿಯರಿಗೆ ಸಿಹಿ ಸುದ್ದಿ – ದುಬಾರಿ ಮದ್ಯದ ದರ ಇಳಿಕೆ

Team Newsnap
1 Min Read

ಬೆಂಗಳೂರು: ರಾಜ್ಯ ಸರ್ಕಾರ ಅಬಕಾರಿ ಆದಾಯ ಹೆಚ್ಚಿಸಲು ಮದ್ಯದ ದರ ಇಳಿಸಲು ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಮದ್ಯ ದರ ಇಳಿಕೆಯಾಗುವ ಸಾಧ್ಯತೆ ಇದೆ.

ನಮ್ಮ ರಾಜ್ಯದಲ್ಲಿ ನೆರೆಹೊರೆಯ ರಾಜ್ಯಕ್ಕಿಂತ ಮದ್ಯದ ದರ ಹೆಚ್ಚಿದ್ದು ,ಹೀಗಾಗಿ ಗಡಿಭಾಗದ ಜನ ಅನ್ಯ ರಾಜ್ಯಕ್ಕೆ ತೆರಳಿ ಮದ್ಯ ಖರೀದಿ ಮಾಡುತ್ತಿದ್ದಾರೆ.

ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂ. ಹಣ ನಷ್ಟವಾಗುತ್ತಿದ್ದು , ಈ ನಷ್ಟವನ್ನು ತಪ್ಪಿಸಲು ಮದ್ಯ ದರ ಇಳಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಹೀಗಾಗಿ ಅಬಕಾರಿ ಇಲಾಖೆ 16 ಸ್ಲ್ಯಾಬ್‌ಗಳ ದರ ಇಳಿಕೆಗೆ ಮುಂದಾಗಿದ್ದು, ಸೆ.1 ರಿಂದ ರಾಜ್ಯದಲ್ಲಿ ದುಬಾರಿ ಮದ್ಯ ಕಡಿಮೆ ಬೆಲೆಗೆ ಸಿಗಲಿದೆ.

ಈ ತಿಂಗಳಲ್ಲೇ ದುಬಾರಿ ಬೆಲೆಯ ಬ್ರಾಂದಿ, ವಿಸ್ಕಿ ಜಿನ್, ರಮ್ ಅಗ್ಗವಾಗಲಿದ್ದು,ಪ್ರತಿ ಬ್ರ್ಯಾಂಡ್ ಮದ್ಯದ ಪರಿಷ್ಕøತ ದರ ಪಟ್ಟಿ ಇಂದು ಅಥವಾ ಶನಿವಾರ ಬಿಡುಗಡೆಯಾಗುವ ಸಂಭವವಿದೆ.ಮತ್ತೆ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ

ಮುಖ್ಯಮಮಂತ್ರಿ ಸಿದ್ದರಾಮಯ್ಯ ಅವರು ನೆರೆಹೊರೆಯ ರಾಜ್ಯಗಳ ಮದ್ಯ ಮಾರಾಟ ದರವನ್ನು ಪರಿಗಣಿಸಿ ಕರ್ನಾಟಕದಲ್ಲೂ ಮದ್ಯದ ದರ ಪರಿಷ್ಕರಣೆ ಮಾಡಲಾಗುವುದು ಎಂದು ಘೋಷಿಸಿದ್ದರು. ಬಳಿಕ ಜುಲೈನಿಂದ ದರ ಹೆಚ್ಚಳ ಆಗಬೇಕಿತ್ತು, ಆದರೆ ಸಿಎಂ ಸೂಚನೆಯ ಮೇರೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.

Share This Article
Leave a comment