January 14, 2025

Newsnap Kannada

The World at your finger tips!

ibrahim 1

ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಇಬ್ರಾಹಿಂ – ಕಾಂಗ್ರೆಸ್ ಗೂ , ನಂಗೂ ಮುಗಿದ ಅಧ್ಯಾಯ

Spread the love

ಕಾಂಗ್ರೆಸ್ ಗೆ ಗುಡ್ ಬೈಹೇಳಿರುವ ಹಿರಿಯ ನಾಯಕ ಸಿ ಎಂ ಇಬ್ರಾಹಿಂ
ಕಾಂಗ್ರೆಸ್​ಗೂ , ನನಗೂ ಮುಗಿದ ಅಧ್ಯಾಯ ಎಂದಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ ನಿನ್ನೆ ಬಿ.ಕೆ.ಹರಿಪ್ರಸಾದ್​ ಅವರಿಗೆ ವಿಧಾನ ಪರಿಷತ್​​ನ ವಿಪಕ್ಷ ನಾಯಕನ ಜಾವಾಬ್ದಾರಿಯನ್ನು ನೀಡಿ ಕಾಂಗ್ರೆಸ್​ ಹೈಕಮಾಂಡ್ ಆದೇಶ ಹೊರಡಿಸಿದೆ. ಈ ಎಐಸಿಸಿ ಈತೀರ್ಮಾನ ನೋಡಿ ಮನಸ್ಸಿಗೆ ಸಂತೋಷ ಆಯ್ತು. ಹರಿಪ್ರಸಾದ್, ಶಿವಕುಮಾರ್ ಒಳ್ಳೆಯ ಟೀಮ್. ವಿಚಾರಧಾರೆಗಳು ಒಂದೇ ಆಗಿದ್ದರಿಂದ ಹರಿಪ್ರಸಾದ್ ಅವರನ್ನು ನೇಮಕ ಮಾಡಿದ್ದಾರೆ. ಎಂದು ವ್ಯಂಗ್ಯವಾಡಿದರು

ನನ್ನ ಹಿತೈಶಿಗಳ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್​ಗೂ ನನಗೂ ಮುಗಿದ ಅಧ್ಯಾಯ ಎಂದಿದ್ದಾರೆ.

ನನ್ನ ಈಗಿನ ಸ್ಥಿತಿ ಹೇಗಿದೆ ಅಂದ್ರೆ
ತಬ್ಬಲಿ ನೀ ಆದೆಯಎಂಬಂತಾಗಿದೆ.
ಸಿದ್ದರಾಮಯ್ಯಗಾಗಿ ದೇವೇಗೌಡರಂತಹ ಮಹಾನಾಯಕರನ್ನು ಬಿಟ್ಟು ಬಂದೆ. ಇವತ್ತು ಗುರುವಾರ ಉಪವಾಸ ಇದ್ದೇನೆ. ಇದಕ್ಕೆ ಉತ್ತರವನ್ನು , ಕರ್ನಾಟಕದ ರಾಜ್ಯದ ಜನ ಕೊಡ್ತಾರೆ ಎಂದು ಕಿಡಿಕಾರಿದರು.

ಆದಷ್ಟು ಬೇಗ ನನ್ನ ನಿರ್ಣಯ ಹೇಳ್ತೇನೆ. ಸಿದ್ದರಾಮಯ್ಯರನ್ನು ಬಾದಾಮಿಗೆ ಕರ್ಕೊಂಡು ಹೋಗಿ, ನಾಮಿನೇಷನ್ ಮಾಡಿಸಿದೆ. ಸಿದ್ದರಾಮಯ್ಯಗೆ ಹೊಸ ರಾಜಕೀಯ ಜೀವನ ಕೊಟ್ಟಿದ್ದಕ್ಕೆ, ಒಳ್ಳೆಯ ಉತ್ತರ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ದೊಡ್ಡವರು, ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಇಬ್ರಾಹಿಂ ಹೇಳಿದರು.

Copyright © All rights reserved Newsnap | Newsever by AF themes.
error: Content is protected !!