ಮಂಡ್ಯದ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ರನ್ನು ಹನಿಟ್ರ್ಯಾಪ್ ಸುಳಿಗೆ ಸಿಲುಕಿ 50 ಲಕ್ಷ ರು ಹಣ ಕಿತ್ತುಕೊಂಡ ಮಹಿಳೆಯೊಬ್ಬಳನ್ನು ಮಂಡ್ಯದ ಪಶ್ಚಿಮ ಪೋಲಿಸರು ಬಂಧಿಸಿದ್ದಾರೆ
ಹನಿಟ್ರ್ಯಾಪ್ ಯುವತಿ ಸೇರಿದಂತೆ ಏಳು ಮಂದಿ ಗ್ಯಾಂಗ್ ಈ ಕೃತ್ಯದಲ್ಲಿ ಭಾಗಿಯಾಗಿದೆ. ಐವರು ನಾಪತ್ತೆಯಾಗಿದ್ದಾರೆ.
ಮಂಡ್ಯದ ಕೆರೆ ಅಂಗಳದ ನಿವಾಸಿ ಸಲ್ಮಾ ಭಾನು ಎಂಬಾಕೆಯೇ ಈ ಹನಿಟ್ರ್ಯಾಪ್ ಪ್ರಕರಣದ ರುವಾರಿ. ಮಾಂಸ ತಿಂದು ದೇವಸ್ಥಾನಕ್ಕೆ ಬಂದ ಸಿದ್ದರಾಮಯ್ಯ – ಬಿಜೆಪಿ ಅಪಪ್ರಚಾರ : ಸಿದ್ದು
ಕಳೆದ ಕೆಲವು ದಿನಗಳಿಂದ ಯುವತಿಯೊಬ್ಬಳ ಮೂಲಕ ರಿಯಲ್ ಎಸ್ಟೇಟ್ ಉದ್ದಮಿಯೂ ಆಗಿರುವ ಜಗನ್ನಾಥ್ ಶೆಟ್ರುಗೆ ಮೊಬೈಲ್ ಕರೆ ಮಾಡಿಸಿ ಸ್ನೇಹ ಸಂಪಾದಿಸುವಂತೆ ಮಾಡಿದ್ದಾರೆ.


ನಂತರ ಮೈಸೂರಿನ ಲಾಡ್ಜ್ ಗೆ ಆ ಯುವತಿ ಹೇಳಿದ್ದಾಳೆ. ಅಲ್ಲಿಗೆ ಹೋದ ಶೆಟ್ರು ಯುವತಿ ಸಲುಗೆಯಿಂದ ಇರುವ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಂದ ನಂತರ ಯುವತಿ, ಸಲ್ಮಾ ಬಾನು ಸೇರಿ 7 ಮಂದಿ ಗ್ಯಾಂಗ್ ಶೆಟ್ರ ಬಳಿ 50 ಲಕ್ಷ ರುಗಳನ್ನು ಬ್ಲ್ಯಾಕ್ ಮೇಲ್ ಮಾಡಿ ಕಿತ್ತುಕೊಂಡು ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಗ್ಯಾಂಗ್ ಬೇಡಿಕೆ ಹೆಚ್ಚಾದಂತೆ ಜಗನ್ನಾಥ್ ಶೆಟ್ಟರು ಕೊನೆಗೆ ರೋಸಿ ಹೋಗಿ ಪೋಲಿಸರಿಗೆ ದೂರು ನೀಡಿದರು.
ನಂತರ ಹನಿಟ್ರ್ಯಾಪ್ ಪ್ರಕರಣದ ರುವಾರಿ ಸಲ್ಮಾಬಾನು ಬಂಧಿಸಿ ನಂತರ ತಲೆ ಮರೆಸಿಕೊಂಡಿರುವ ಯುವತಿ ಹಾಗೂ ಇತರ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಬಂಧನಕ್ಕೆ ಒಳಗಾದ ಸಲ್ಮಾ ಬಾನುಳನ್ನು 10 ದಿನಗಳ ಕಾಲ ವಿಚಾರಣೆಗೆ ಪೋಲಿಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಮಂಡ್ಯದ ಪಶ್ಚಿಮ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.


- ಬೆಳ್ಳೂರು ಸಮೀಪ ಸಾರಿಗೆ ಬಸ್ ಗೆ ಕಾರು ಢಿಕ್ಕಿ : ನಾಲ್ವರ ಸಾವು
- 40 ಸಾವಿರ ರು ಲಂಚ ಸ್ವೀಕಾರ : ಲೋಕಾ ಬಲೆಗೆ ಬಿದ್ದ ಅಧಿಕಾರಿ
- ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ – ಪೋಲಿಸರಿಗೆ ಸಿಎಂ ಸಿದ್ದು ಕಿವಿಮಾತು
- ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..
- ಸೆ.28 ರಿಂದ 18 ದಿನಗಳವರೆಗೆ ತ. ನಾಡಿಗೆ ಮತ್ತೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ – ರಾಜ್ಯಕ್ಕೆ ಶಾಕ್
- ನಟ ಬ್ಯಾಂಕ್ ಜನಾರ್ಧನ್ ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ