ಅಕ್ಷಯ ತೃತೀಯಕ್ಕೆ ಬಂಗಾರದ ಬೆಲೆ ಮತ್ತಷ್ಟು ಗಗನಕ್ಕೆ ?

Team Newsnap
1 Min Read

ಅಕ್ಷಯ ತೃತೀಯಕ್ಕೆ ಬಂಗಾರ ಖರೀದಿ ಭರಾಟೆ ಜೋರು. ಈ ಚಿನ್ನ ಖರೀದಿಸಿದರೆ ಅಕ್ಷಯವಾಗುತ್ತದೆ ಎಂಬ ಭಾರತೀಯರ ನಂಬಿಕೆ.

ಈ ನಡುವೆ ಕೆಲವು ದಿನಗಳಿಂದ ಬಂಗಾರ ಬೆಲೆ ಏರಿಕೆಯಾಗುತ್ತಿದೆ, ಇದು ಗ್ರಾಹಕರಿಗೆ ಹೊರೆಯಾದ ಸಂಗತಿಯಾಗಿದೆ.
ಬಂಗಾರ ಬೆಲೆಯ ಬಗ್ಗೆ ಮಾಹಿತಿ:

ಏಪ್ರಿಲ್ 6 ಅಂದರೆ ಇವತ್ತು ಬೆಂಗಳೂರಿನಲ್ಲಿ ಬಂಗಾರದ ದರ 22 ಕ್ಯಾರೆಟ್​ನ 1 ಗ್ರಾಂ ಚಿನ್ನಕ್ಕೆ 5,930 ರೂಪಾಯಿ ಇದ್ದು ನಿನ್ನೆಗೆ ಹೋಲಿಸಿದರೆ ಇವತ್ತು 95 ರೂ.ಗಳು ಹೆಚ್ಚಳ ಕಂಡಿದೆ.

22 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 56,300 ರೂಪಾಯಿ ಇದೆ. ಅದರಂತೆ 10 ಗ್ರಾಂ ಚಿನ್ನವನ್ನು ನಿನ್ನೆಯ ಬೆಲೆಗಿಂತ 950 ರೂ.ಗಳು ಹೆಚ್ಚಳವಾಗಿದೆ.

24 ಕ್ಯಾರೆಟ್​ನ 1 ಗ್ರಾಂ ಚಿನ್ನಕ್ಕೆ 6,141 ರೂಪಾಯಿ ಇದ್ದು ನಿನ್ನೆಗೆ ಬೆಲೆಗಿಂತ ಇವತ್ತು 103 ರೂ.ಗಳು ಹೆಚ್ಚಳವಾಗಿದೆ.

24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 61,410 ರೂಪಾಯಿ ಇದೆ. 10 ಗ್ರಾಂ ಚಿನ್ನವು ನಿನ್ನೆಯ ಬೆಲೆಗಿಂತ 1,030 ರೂ.ಗಳು ಅಧಿಕಗೊಂಡಿದೆ.


1 ಗ್ರಾಂ ಬೆಳ್ಳಿಯ ಬೆಲೆ 80.70 ರೂಪಾಯಿ ಇದ್ದು 2 ರೂಪಾಯಿ 90 ಪೈಸೆ ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿಯ ಬೆಲೆಯು 807 ರೂಪಾಯಿ ಇದ್ದು, ನಿನ್ನೆ ಬೆಲೆಗಿಂತ ಇವತ್ತು 29 ರೂಪಾಯಿ ಹೆಚ್ಚಳವಾಗಿದೆ. 1 ಕೆ.ಜಿ ಬೆಳ್ಳಿ 80,700 ರೂಪಾಯಿ ಆಗಿದ್ದು ನಿನ್ನೆಗಿಂತ 2,900 ರೂಪಾಯಿಗಳು ಅಧಿಕವಾಗಿದೆ.ಇದನ್ನು ಓದಿ -ಜೂನ್ 5ಕ್ಕೆ ಅಭಿಷೇಕ್ ಅಂಬರೀಶ್‌ ಮದುವೆ ಫಿಕ್ಸ್ : ಪ್ರಧಾನಿಗೆ ಆಹ್ವಾನ

Share This Article
Leave a comment