ಗೋದ್ರಾ ಹತ್ಯಾಕಾಂಡ ಪ್ರಕರಣಕ್ಕೆಹೊಸ ತಿರುವು: ​ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನ

Team Newsnap
1 Min Read

ಗುಜರಾತ್ ನ ಗೋದ್ರಾ ಹತ್ಯಾಕಾಂಡ ಹಾಗೂ ಗಲಭೆ ಪ್ರಕರಣದಿಂದ ಪ್ರಧಾನಿ ನರೇಂದ್ರ ಮೋದಿಗೆ ಸುಪ್ರೀಂ ಕೋರ್ಟ್‌ ಕ್ಲೀನ್ ಚಿಟ್ ನೀಡಿದ್ದ ಆದೇಶವನ್ನು ಎತ್ತಿಹಿಡಿದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರು ತೀಸ್ತಾ ಸೆಟಲ್ವಾಡ್ ಅವರ ಎನ್‌ಜಿಒ ವಿರುದ್ಧ ವಾಗ್ದಾಳಿ ಮಾಡಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಹೋರಾಟಗಾರ್ತಿ, ಎನ್ ಜಿ ಒ ಮುಖ್ಯಸ್ಥೆ ತೀಸ್ತಾ ಸೆಟಲ್ವಾಡಾ ಬಂಧನವಾಗಿದೆ.

ತೀಸ್ತಾ ಸೆಟಲ್ವಾಡ್ ಬಂಧನವಾಗಿದ್ದೇಕೆ ಅಂತಾ ಹೇಳೋಕು ಮುನ್ನ ಗೃಹ ಸಚಿವ ಅಮಿತ್ ಶಾ ಆಕೆಯ ಕುರಿತು ಮಾತನಾಡಿದರು

ಕೇಂದ್ರ ಗೃಹ ಸಚಿವ ಅಮಿತ್‌ ಹೇಳಿದಿಷ್ಟು . 2002ರಲ್ಲಿ ನಡೆದಿದ್ದ ಗಲಭೆ ರಾಜಕಾರಣಿಗಳು, ಪತ್ರಕರ್ತರು ಮತ್ತು ಎನ್‌ಜಿಓ ಈ ಮೂರು ಕೂಟಗಳು ಸೇರಿ ಮಾಡಿದ್ದ ಕುತಂತ್ರ. ಅಲ್ಲದೇ ಎನ್‌ಜಿಒ ಮೋದಿ ವಿರುದ್ಧ ಮಾಡಿದ್ದ ಸುಳ್ಳು ಆರೋಪ ಅಂತಾ ಕಿಡಿಕಾರಿದರು. ಕೆಲವೇ ಗಂಟೆಗಳಲ್ಲಿ ತಿಸ್ತಾ ಸೆಟಲ್ವಾಡರ ಬಂಧನವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ ಹಿರಿಯ ಸಾಧಕರಿಗೆ ಘೋಷಣೆ

2002ರ ಗುಜರಾತ್ ಗಲಭೆಯಲ್ಲಿ ಸಂತ್ರಸ್ತರ ಪರ ಎನ್‌ಜಿಒ ಕಾರ್ಯನಿರ್ವಹಿಸಿತ್ತು. ಸಂತ್ರಸ್ತರಿಗೆ ನ್ಯಾಯ ಒದಗಿಸಲೆಂದೇ ತೀಸ್ತಾ ಸೆಟಲ್ವಾಡ್, ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಹೆಸರಲ್ಲಿ ಎನ್‌ಜಿಒ ಸ್ಥಾಪನೆ ಮಾಡಿ, ಈ ಎನ್‌ಜಿಒ ಕೋರ್ಟ್‌ಗಳಲ್ಲಿ ವಕಲಾತ್ತು ವಹಿಸಲೆಂದು ಹುಟ್ಟುಹಾಕಿದ ಸಂಸ್ಥೆಯಾಗಿತ್ತು. ಆದರೆ ಈ ಸಂಸ್ಥೆಯು ಮೋದಿ ವಿರುದ್ಧ ಸುಳ್ಳು ಮಾಹಿತಿ ನೀಡಿದ್ದಾಗಿ ಆರೋಪ ಕೇಳಿಬಂದಿದೆ. ಹೀಗಾಗಿ ಮುಂಬೈನಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧಿಸಲಾಗಿದೆ ಎನ್ನಲಾಗಿದೆ. ಇನ್ನೂ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ ಪೊಲೀಸರು ತೀಸ್ತಾರನ್ನು ಬಂಧಿಸಿ ಕರೆದೊಯ್ದಿದ್ದಾರೆ.

Share This Article
Leave a comment