ಏಡಿ ಹಿಡಿಯಲು ಹೋಗಿ ಬಾಲಕ ನೀರು ಪಾಲು

Team Newsnap
1 Min Read

ನಾಲೆಯಲ್ಲಿ ಏಡಿ ಹಿಡಿಯಲು ಹೋಗಿ ನೀರು ಪಾಲದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ನಾಲೆ ಬಳಿ ಬುಧವಾರ ನಡೆದಿದೆ. ಅನಿತ್ ನಾಲೆಗೆ ಬಿದ್ದು ಮೃತಪಟ್ಟ ದುರ್ದೈವಿ.

ಬೆಳಗ್ಗೆ 8:30ರ ಸುಮಾರಿಗೆ ಬ್ಯಾಡಗೂಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಕೇಂದ್ರದ ಬಳಿಯಿಂದ ಸ್ನೇಹಿತರೊಂದಿಗೆ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಾರಂಗಿ ನಾಲೆಯಲ್ಲಿ ಏಡಿ ಕಾಣಿಸಿದೆ. ಅನಿತ್ ತನ್ನ ಗೆಳೆಯರಿಗೆ ಏಡಿ ಹಿಡಿದುಕೊಂಡು ಬರುವೆ ಎಂದು ನಾಲೆ ಸಮೀಪ ಹೋಗಿದ್ದಾನೆ.

ಆಕಸ್ಮಿಕವಾಗಿ ಕಾಲು ಜಾರಿ ನಾಲೆಯಲ್ಲಿ ಕೊಚ್ಚಿಕೊಂಡು ಹೋದ ಅನಿತ್ ಗಾಗಿ ಸ್ನೇಹಿತರು ಆತನನ್ನು ರಕ್ಷಣೆ ಮಾಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ,ನಂತರ ಶಾಲಾ ಬಾಲಕರು ಹಾಗೂ ಗ್ರಾಮಸ್ಥರು ನಾಲೆಯಲ್ಲಿ ಅನಿತ್ ಕಣ್ಮರೆಯಾಗಿರುವ ವಿಷಯ ತಿಳಿಸಿದ್ದಾರೆ.

ಅನಿತ್‌ನ ಹುಡುಕಾಟಕ್ಕಾಗಿ ಹಾರಂಗಿ ಜಲಾಶಯದಿಂದ ನಾಲೆಗೆ ಬಿಟ್ಟಿರುವ ನೀರನ್ನು ಸ್ಥಗಿತಗೊಳಿಸಿ, ಅಗ್ನಿ ಶಾಮಕ ದಳದವರು ಬಾಲಕನಿಗಾಗಿ ಶೋಧ ಕಾರ್ಯ ನಡೆಸಿ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತಪಟ್ಟ ಬಾಲಕ ಅನಿತ್‌ ಪ್ರತಿಭಾವಂತ ವಿದ್ಯಾರ್ಥಿ, ನೃತ್ಯ ತರಬೇತಿಯಲ್ಲೂ ಹೆಸರು ಮಾಡಿದ್ದ. ಚೀನಾದಲ್ಲಿ ನಡೆದ ನ್ಯಾಷನಲ್ ಲೆವೆಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಭಾಗವಹಿಸಿದ್ದ.

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಥೈಲೆಂಡ್‌ನಲ್ಲಿ ನಡೆಯಲಿರುವ ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ಭಾರತ ತಂಡದಿಂದ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದ. 

Share This Article
Leave a comment