July 7, 2022

Newsnap Kannada

The World at your finger tips!

death,BJP,suicide

rekha: i was in 6 years live in relationship

ಬಿಜೆಪಿ ಮುಖಂಡ ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಕುರಿತು ಗೆಳತಿ ರೇಖಾ ಚಾಟಿಂಗ್

Spread the love

ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಯ ಪ್ರಕರಣ ದಿನಕ್ಕೊಂದು ತಿರುವು ಕಾಣುತ್ತಿದೆ ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಕುರಿತು ಬಗ್ಗೆ ಗೆಳತಿ ರೇಖಾ ಮತ್ತೊಬ್ಬ ಗೆಳೆಯನಿಗೆ ಚಾಟಿಂಗ್ ಮಾಡಿ ಮಾಹಿತಿ ನೀಡಿದ ಸಂಗತಿ ವೈರಲ್ ಆಗಿದೆ

ಇದನ್ನು ಓದಿ –ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ತೆರೆ: 52 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ರಾಜ್ಯದ ಜೊತೆ ಒಪ್ಪಂದ

ಈ ನಡುವೆ ಅನಂತರಾಜು ಆತ್ಮಹತ್ಯೆಗೆ ಸಂಬಂಧ ಬಂಧನಕ್ಕೊಳಗಾಗಿದ್ದ ಗೆಳತಿ ಹಾಗೂ ಇಬ್ಬರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಅನಂತರಾಜು ಗೆಳತಿ ಹಾಗೂ ಇನ್ನುಳಿದ ಇಬ್ಬರು ಆರೋಪಿಗಳಾದ ಸ್ಪಂದನಾ ಹಾಗೂ ವಿನೋದ್‍ಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಅನಂತರಾಜು ಇದೇ ತಿಂಗಳು 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಯಾವುದು? :

ಅನಂತರಾಜು ಗೆಳತಿ ರೇಖಾ ಅಪರಿಚಿತ ವ್ಯಕ್ತಿಯೊಂದಿಗೆ ಚಾಟಿಂಗ್ ಮಾಡಿರುವುದು ವೈರಲ್ ಆಗಿದೆ.

ವೈರಲ್ ಆದ ಚಾಟಿಂಗ್‍ನಲ್ಲೇನಿದೆ?:

ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ – ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ನಾನು ಯಾರ ಮಾರ್ಯಾದೆ ಕಳೆಯುವುದಕ್ಕೂ ಸಿದ್ಧ. ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ. ಅದನ್ನು ಅವನ ಹೆಂಡ್ತಿಗೆ ಕಳುಹಿಸಿದರೆ ಅವಳೇ ಅನಂತರಾಜುನ ಸಾಯಿಸ್ತಾಳೆ. ಅಷ್ಟೊಂದು ಅಶ್ಲೀಲವಾಗಿವೆ ಆ ವೀಡಿಯೋಗಳು. ಆ ರೀತಿ ಆಗಬಾರದು ಅನ್ನೋದಾದರೆ ಅನಂತರಾಜು ಮೇ 15ರ ಒಳಗೆ ನನ್ನ ಭೇಟಿ ಮಾಡಬೇಕು. ಸೆಟಲ್ಮೆಂಟ್ ಮಾಡಿಕೊಂಡು ಅನಂತರಾಜು ನೆಮ್ಮದಿಯಾಗಿರಲಿ ಎಂದು ಅನಂತರಾಜು ಗೆಳತಿ ಚಾಟಿಂಗ್ ಮಾಡಿದ್ದಳು.

ಜೊತೆಗೆ ಅನಂತರಾಜು ಗೆಳತಿ ತನ್ನ ಇತರೆ ಗೆಳತಿಯರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿರುವ ವೀಡಿಯೋ ಕೂಡ ವೈರಲ್.

error: Content is protected !!