November 27, 2022

Newsnap Kannada

The World at your finger tips!

political party

ಗುಲಾಂ ನಬಿ ಆಜಾದ್ ಹೊಸ ಪಕ್ಷ ಸ್ಥಾಪನೆ – 15 ದಿನದಲ್ಲಿ ಪ್ರಕಟ ?

Spread the love

ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಶಾಕ್ ನೀಡಿರುವ ಗುಲಾಂ ನಬಿ ಆಜಾದ್ ಮುಂದೇನ್ ಮಾಡ್ತಾರೆ? ಬಿಜೆಪಿ ಸೇರ್ತಾರಾ? ಎಂಬೆಲ್ಲಾ ಚರ್ಚೆಗಳು ಶುರುವಾಗಿವೆ.

ಈ ಮಧ್ಯೆ ಆಪ್ತ ಜಿ.ಎಂ ಸರೂರಿ ಮಾಧ್ಯಮಗಳಿಗೆ ಮಾಹಿತಿ ನೀಡಿ ನಮ್ಮ ನಾಯಕರು 15 ದಿನದಲ್ಲಿ ಸ್ವಂತ ಪಕ್ಷವನ್ನು ಹುಟ್ಟುಹಾಕಲಿದ್ದಾರೆ ಎಂದರು.

ಮೊದಲು ಜಮ್ಮು-ಕಾಶ್ಮೀರದಲ್ಲಿ ಪಕ್ಷ ರಚನೆ ಆಗಲಿದೆ. ಆಗಸ್ಟ್​ 5, 2019ರ ಪೂರ್ವದ ಸ್ಥಿತಿಯನ್ನು ಮರುಸ್ಥಾಪಿಸುವುದು ಪಕ್ಷದ ಪ್ರಣಾಳಿಕೆಯ ಭಾಗವಾಗಿರುತ್ತದೆ ಎಂದು ಸರೂರಿ ತಿಳಿಸಿದ್ದಾರೆ.

ಆಜಾದ್ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಅನುಯಾಯಿಗಳು ಕೂಡ ಗುಡ್​ಬೈ ಹೇಳಿದ್ದಾರೆ. ಅವರೆಲ್ಲರೂ ಕೂಡ, ಆಜಾದ್​ಗೆ ಬೆಂಬಲ ನೀಡಲಿದ್ದಾರೆ. ಕಾಶ್ಮೀರದ ನೂರಾರು ಕಾಂಗ್ರೆಸ್​ ನಾಯಕರು, ಪಂಚಾಯತ್ ಸದಸ್ಯರು ಕೂಡ ಆಜಾದ್ ಪಕ್ಷಕ್ಕೆ ಸೇರಲಿದ್ದಾರೆ.

error: Content is protected !!