November 15, 2024

Newsnap Kannada

The World at your finger tips!

neet,pg,exam

NEET-PG 2021 - Counseling for 1,456 seats only: Supreme

ಅಶಕ್ತರಿಗೆ ಮನೆಗೆ ತೆರಳಿ ಲಸಿಕೆ : 2 ವಾರದೊಳಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೇಂದ್ರಕ್ಕೆ ತಾಕೀತು

Spread the love

ಅಶಕ್ತರಿಗೆ ಮನೆ ಮನೆಗೆ ಹೋಗಿ ಕೋವಿಡ್ ಲಸಿಕೆ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಎರಡು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ.


ಇವರಾ ಫೌಂಡೇಶನ್ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾ. ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು.


ಅಂಗವಿಕಲರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮ ಅಲ್ಲದೆ ಹೊಸ ಕ್ರಮಗಳಿಗೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ತಿಳಿಸಿದೆ.


ಸೇವಾ ಸಂಸ್ಥೆ ಪರವಾಗಿ ಹಾಜರಿದ್ದ ವಕೀಲ ಪಂಕಜ್ ಸಿನ್ಹಾ, ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ಕೊಡುವುದರಿಂದ ಹೆಚ್ಚಿನ ಜನರಿಗೆ ನೀಡಬಹುದು ಎಂಬುದಾಗಿ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿರುವ ದಾಖಲೆ ಸೇರಿ ಎರಡು ದಾಖಲೆ ಉಲ್ಲೇಖಿಸಿದರು.


ಜಾರ್ಖಂಡ್ ಹಾಗೂ ಕೇರಳ ರಾಜ್ಯದಲ್ಲಿ ಈ ವಿಧಾನ ಯಶಸ್ವಿಯಾಗಿದೆ. ಇದೇ ರೀತಿ ಬೇರೆ ರಾಜ್ಯಗಳಲ್ಲೂ ಜಾರಿಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.

Copyright © All rights reserved Newsnap | Newsever by AF themes.
error: Content is protected !!