ಪಾಸ್ ಪಡೆದುಕೊಂಡು ಮದುವೆಗಳಿಗೆ ಹೋಗಬೇಕು – ಸಚಿವ ಆರ್. ಅಶೋಕ್

Team Newsnap
1 Min Read
Mandya District Minister R. Ashok is out of responsibility ಮಂಡ್ಯ ಜಿಲ್ಲಾಮಂತ್ರಿ ಜವಾಬ್ದಾರಿಯಿಂದ ಸಚಿವ ಆರ್ . ಅಶೋಕ್ ಔಟ್

ಮದುವೆಗಳಿಗೆ ಇನ್ನು ಮುಂದೆ ಪಾಸ್ ಕಡ್ಡಾಯ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್ ಈಗಾಗಲೇ ಬುಕ್ ಆಗಿರುವ ಮದುವೆಗಳಿಗೆ ಪಾಸ್ ಬೇಕಿಲ್ಲ. ಆದರೆ ಇವತ್ತಿನಿಂದ ಬುಕ್ ಆಗುವ ಮದುವೆಗಳಿಗೆ ಪಾಸ್ ಕಡ್ಡಾಯ ಎಂದು ಹೇಳಿದರು.

ಕಲ್ಯಾಣ ಮಂಟಪಗಳಲ್ಲಿ 100 ಮಂದಿಗಷ್ಟೇ ಅವಕಾಶ ನೀಡಲಾಗುತ್ತದೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಸೇರಿದರೆ ಎಫ್‍ಐಆರ್ ದಾಖಲಿಸಲಾಗುತ್ತದೆ.

ಮದುವೆ ಪಾಸ್ ಗಳನ್ನು ಮದುವೆ ಆಯೋಜಕರೇ ವಿತರಣೆ ಮಾಡಬೇಕು. ಹೆಚ್ಚಿನ ಪಾಸ್ ಕೊಟ್ಟಿದ್ದರೆ ಕಲ್ಯಾಣ ಮಂಟಪ ಮಾಲೀಕರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. ಅಲ್ಲದೆ ಮದುವೆ ಮಾಡುವ ಕುಟುಂಬಸ್ಥರ ವಿರುದ್ಧ ಎಫ್‍ಐಅರ್ ದಾಖಲು ಮಾಡಲಾಗುವುದು ಎಂದರು.

50 ಪಾಸ್ ಗಳನ್ನು ಅಲ್ಲಿನ ತಹಶೀಲ್ದಾರರು ನೀಡಿ ಮಾಡಿ ಆಯಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

ಮಂಟಪದ ಒಳಗೆ ಆದರೆ 100, ಹೊರಗಡೆ ಆದರೆ 200 ಜನ ಅಷ್ಟೆ ಇರಬೇಕು. ಸರ್ಕಾರ ನಿಗದಿ ಮಾಡಿರುವ ಪಾಸ್ ಅಷ್ಟೆ ಕೊಡೋದು. ಅದಕ್ಕಿಂತ ಹೆಚ್ಚಾದರೆ ನಾವು ಕಲ್ಯಾಣ ಮಂಟಪವನ್ನೇ ಮುಚ್ಚಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Share This Article
Leave a comment