ಜರ್ಮನಿಯ (German) ಏಕೀಕರಣವು ಸಾವಿರಾರು ವರ್ಷಗಳ ಇಂದಿನ ಸುದೀರ್ಘ ಇತಿಹಾಸವನ್ನು ಹೊಂದಿದ್ದು ಜರ್ಮನಿಯ ಏಕೀಕರಣಕ್ಕೆ ಕಾರಣವಾದ ಪ್ರಮುಖ ಘಟನೆಗಳ ಮೇಲೆ ಬೆಳಕು ಚೆಲ್ಲೋಣ.
ಏಕೀಕರಣದ ಮೊದಲು ಜರ್ಮನಿಯು ಒಂದು ದೇಶಕ್ಕಿಂತ ಹೆಚ್ಚಾಗಿ ಸಣ್ಣ ಸಾಮ್ರಾಜ್ಯಗಳನ್ನು ಹೊಂದಿತ್ತು . 19ನೇ ಶತಮಾನದವರೆಗೆ ಯಾವುದೇ ಏಕರೂಪದ ಜರ್ಮನ್ ಗುರುತು ಇರಲಿಲ್ಲ.
ಇದನ್ನು ಓದಿ –ಮೈಸೂರು ದಸರಾ 2024: ನಾಳೆ ಉದ್ಘಾಟನೆ, ವಿಶೇಷ ಕಾರ್ಯಕ್ರಮಗಳ ವಿವರ
1990 ರ ಅಕ್ಟೋಬರ್ 3 ನೇ ದಿನಾಂಕವನ್ನು ಜರ್ಮನಿಯ ಏಕತೆಯ ದಿನವನ್ನಾಗಿ ಆಚರಿಸಲು ಪರಿಗಣಿಸಲಾಯಿತು. ಇದನ್ನು ಪ್ರತಿವರ್ಷ ಜರ್ಮನಿಯ (German) ರಾಷ್ಟ್ರೀಯ ದಿನವನ್ನಾಗಿ ಸಡಗರ, ಆಡಂಬರದಿಂದ ಆಚರಿಸಲಾಗುತ್ತದೆ.
ನಾವು ಜರ್ಮನ್ (German) ಏಕತೆ ದಿನದ ಇತಿಹಾಸವನ್ನು ನೋಡಿದಾಗ ಜರ್ಮನಿಯ ಫೆಡರಲ್ ರಿಪಬ್ಲಿಕ್ ಮತ್ತು ಡೆಮೊಕ್ರೆಟಿಕ್ ರಿಪಬ್ಲಿಕ್ 1990ರಲ್ಲಿ ಮೊದಲ ಏಕೈಕ ಜರ್ಮನ್ ದೇಶವಾಗಿ ಗುರುತಿಸಲು ಪ್ರಾರಂಭವಾಯಿತು. ನವಂಬರ್ 9 1989 ರಂದು ಘಟಿಸಿದ ಬರ್ಲಿನ್ ಗೋಡೆಯ ಪತನ ಈ ರಾಷ್ಟ್ರೀಯ ದಿನಕ್ಕೆ ದಾರಿಯಾಯಿತು. 19ನೇ ಶತಮಾನದ ಹಾದಿಯಲ್ಲಿ ರಾಜಕೀಯವಾಗಿ, ಆರ್ಥಿಕ, ಸಾಮಾಜಿಕವಾಗಿ ಬಲಹೀನ ವಾಗಿದ್ದು ಪ್ರಸ್ತುತ ಪರಿಸ್ಥಿತಿಯಿಂದ ಜನರು ಅಸಮಾಧಾನಗೊಂಡು ಸುಧಾರಣೆಗಾಗಿ ಆಗ್ರಹಿಸಿದರು.
ಜರ್ಮನಿಯು 360 ರಾಜ್ಯಗಳಾಗಿ ಹರಿದು ಹೋಗಿತ್ತು. ಬೇರೆ ರಾಜ್ಯದ ರಾಜರ ಆಡಳಿತದಿಂದ ಅಲ್ಲಿನ ಜನರು ರೋಸಿಹೋಗಿದ್ದರು. ನೆಪೋಲಿಯನ್ ಬೋನಾಪಾರ್ಟೆ ಹರಿದು ಹಂಚಿಹೋಗಿದ್ದ 360 ರಾಜ್ಯಗಳನ್ನು 50 ರಾಜ್ಯಗಳನ್ನಾಗಿ ಮಾಡಿ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಭೂಮಿಯ ರಕ್ಷಣೆಯ ಜವಾಬ್ದಾರಿಯು ನಮ್ಮೆಲ್ಲರ ಹೊಣೆ ಎಂದು ಜನರಲ್ಲಿ ರಾಷ್ಟ್ರೀಯ ಭಾವವನ್ನು ಜಾಗೃತಗೊಳಿಸಿದನು. ಏಕರೂಪದ ಆಡಳಿತ ಏಕರೂಪದ ಕಾನೂನನ್ನು ಜಾರಿಗೆ ತಂದನು. ಜರ್ಮನಿಯ ರೈನ್ ಒಕ್ಕೂಟ ರಚನೆ ಮಾಡುತ್ತಾನೆ. ಈ ಸಂದರ್ಭ ವಿರೋಧಿಗಳಿಂದ ಪತನವಾಗುತ್ತಾನೆ. ತದನಂತರ ಆಡಳಿತಕ್ಕೆ ಬಂದ ಮೆಟರ್ನಿಕ್ ಜರ್ಮನಿಯು ಸಾಮಾಜಿಕವಾಗಿ ರಾಜಕೀಯವಾಗಿ ಪ್ರಾಬಲ್ಯ ಸಾಧಿಸಬಾರದೆಂದು ರಾಜ್ಯವನ್ನು ಹರಿದು ಹಂಚಿ ವಿದೇಶಿ ರಾಜರ ಆಳ್ವಿಕೆಗೆ ಕೊಡುತ್ತಾನೆ. ಈ ಪ್ರತಿಗಾಮಿ ನೀತಿಯನ್ನು ವಿದ್ಯಾರ್ಥಿಗಳು, ನಾಗರಿಕರು ವಿರೋಧಿಸುತ್ತಾರೆ.
ಜರ್ಮನಿಯ ಏಕೀಕರಣದ ಪ್ರೇರಕ ಅಂಶ
- ಮೆಟರ್ನಿಕನ ಪ್ರತಿಗಾಮಿ ನೀತಿ
- 1830 ಫ್ರೆಂಚ್ ಕ್ರಾಂತಿ ಪ್ರಭಾವ
- 1848 ಫೆಬ್ರುವರಿ ಜುಲೈ ಕ್ರಾಂತಿ
- ಜರ್ಮನಿಯ ದೇಶಪ್ರೇಮಿಗಳ ಹೋರಾಟ
ಒಟ್ಟೊ ವಾನ್ ಬಿಸ್ಮಾರ್ಕ್
ಪ್ರಷ್ಯಾದ ರಾಯಭಾರಿ ಹುದ್ದೆಯಲ್ಲಿದ ಬಿಸ್ಮಾರ್ಕ್ ಪ್ರಧಾನ ಮಂತ್ರಿಯಾದ ನಂತರ
ಜರ್ಮನಿಯನ್ನು ಒಂದುಗೂಡಿಸಿ ಯುರೋಪಿನ ಶಕ್ತಿಯನ್ನಾಗಿ ಬೆಳೆಸಿದ ಮಹಾನ್ ನಾಯಕ. ಜರ್ಮನಿಯ ಏಕೀಕರಣ ಸಾಧಿಸಿದ ಉಕ್ಕಿನ ಮನುಷ್ಯನೆಂದು ಹೆಸರಾದ ಈತ ಚಾಣಾಕ್ಷ ಆಡಳಿತಗಾರ. ಈತನ ಹಲವು ತಂತ್ರಗಳಿಂದ ಜರ್ಮನಿಯು ಏಕೀಕರಣವನ್ನು ಸಾಧಿಸಿತು.
ಹಂತಗಳು
- ಪ್ರಷ್ಯಾ ನಾಯಕತ್ವ ಹೊಂದಿದ, ಆರ್ಥಿಕ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ ರಾಜ್ಯವಾಗಿತ್ತು. ಪ್ರಷ್ಯಾದ ನಾಯಕತ್ವವು
- ಜೊಲ್ವೇರಿನ್ ಸುಂಕಪದ್ದತಿ
ಇದು 2 ರಾಜ್ಯಗಳಲ್ಲಿ ಕಟ್ಟುತಿದ್ದ ಸುಂಕವನ್ನು ಒಂದೇ ಕಡೆಯಲ್ಲಿ ಕಟ್ಟುವಂತೆ ಮಾಡಿತು. - ಕಡ್ಡಾಯ ಸೈನಿಕ ಸೇವೆ
ದೇಶದಲ್ಲಿ ದಂಗೆ ಉಂಟಾದಾಗ ದೇಶ ರಕ್ಷಣೆಯ ದೃಷ್ಟಿಯಿಂದ ಪ್ರತಿಯೊಬ್ಬ ನಾಗರಿಕನು ಯುದ್ಧದಲ್ಲಿ ಪಾಲ್ಲೊಳ್ಳಬೇಕು. - ರಕ್ತ ಮತ್ತು ಉಕ್ಕಿನ ನೀತಿ
ಜರ್ಮನಿಯ ಏಕೀಕರಣವು ಭಾಷಣ ಮತ್ತು ಬರವಣಿಗೆಯಿಂದ ಸಾಧ್ಯವಿಲ್ಲ ಎಂದರಿತ ಬಿಸ್ಮಾರ್ಕ್ ಜನರಿಗೆ ಹೆಚ್ಚಿನ ತೆರಿಗೆ ಹಾಕಿ ಆ ಹಣದಿಂದ ಬಲಿಷ್ಠ ಸೈನ್ಯವನ್ನು ತಯಾರು ಮಾಡುತ್ತಾನೆ. - ಬಿಸ್ಮಾರ್ಕ್ ನು ಜರ್ಮನಿಯ ಏಕೀಕರಣಕ್ಕಾಗಿ ಬಲಿಷ್ಠ ಮಿಲಿಟರಿ ಪಡೆಯೊಂದನ್ನು ತೆಗೆದುಕೊಂಡು ಮಾಡಿದ 3 ಯುದ್ಧಗಳು
- ಡೆನ್ಮಾರ್ಕ್ ನೊಡನೆ ಪ್ರಷ್ಯಾ ಯುದ್ಧ
- ಅಸ್ಟ್ರೋ- ಪ್ರಷ್ಯಾ ಯುದ್ಧ
- ಫ್ರಾಂಕೋ- ಪ್ರಷ್ಯಾ ಯುದ್ಧ ದಕ್ಷಿಣ ಭಾಗದ ರಾಜ್ಯಗಳೆಲ್ಲ ಸೇರಿ ಬಲಿಷ್ಠ ಜರ್ಮನ್ ರಾಷ್ಟ್ರವಾಗುತ್ತದೆ. ಪ್ರಷ್ಯಾದ 1ನೇ ವಿಲಿಯಂ ಜರ್ಮನ್ ಸಾಮ್ರಾಟನಾಗಿ ಕೈಸರ್ ಬಿರುದು ಪಡೆಯುತ್ತಾನೆ. ವಿಶಾಲ ಜರ್ಮನ್ ಸ್ಥಾಪಿತವಾಗುತ್ತದೆ. ಜರ್ಮನಿಯು ಏಕೀಕರಣಗೊಳ್ಳುತ್ತದೆ.
German
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು