ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆ

Team Newsnap
1 Min Read

ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಸೇನಾಪಡೆಯ ಮುಖ್ಯಸ್ಥರಾಗಿದ್ದ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಸೇನಾ ಸಾಹಸಗಾಥೆ ಬಿಂಬಿಸುವ “ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ”ವನ್ನು ಶನಿವಾರ ಲೋಕಾರ್ಪಣೆಗೊಳಿಸಿದರು.

general timanna 3

ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಹುಟ್ಟಿದ ಮನೆ ‘ಸನ್ನಿಸೈಡ್’ ಅನ್ನು ಈಗ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದ್ದು, ತಿಮ್ಮಯ್ಯ ಅವರ ಬಾಲ್ಯದಿಂದ ಸೇನಾ ಬದುಕಿನ ವರೆಗೆ ಅನೇಕ ಘಟನೆಗಳು, ಭಾರತೀಯ ಸೇನಾಪಡೆಯ ಮಹತ್ವ, ಹಾಗೂ ಯುದ್ಧ ಸ್ಮಾರಕಗಳನ್ನು ಅವರು ಈ ವಸ್ತು ಸಂಗ್ರಹಾಲಯದಲ್ಲಿ ವೀಕ್ಷಿಸಿದರು.

ಕೆ.ಎಸ್. ತಿಮ್ಮಯ್ಯ ಅವರ ಸೇನಾ ಸಮವಸ್ತ್ರ, ತಿಮ್ಮಯ್ಯ ಅವರು ಅವರ ತಾತನೊಂದಿಗೆ ಸನ್ನಿಸೈಡ್‌ನಲ್ಲಿ ಮಲಗುತ್ತಿದ್ದ ಗತಕಾಲದ ನೆನಪು ತರುವ ಹಾಸಿಗೆ, ಮಿನಿ ರಾಕೆಟ್ ಲಾಂಚರ್, ಯುದ್ಧದಲ್ಲಿ ಬಳಸಲಾಗುತ್ತಿದ್ದ ಬಂದೂಕುಗಳು ಮುಂತಾದವನ್ನು ಅವರು ವೀಕ್ಷಣೆ ಮಾಡಿದರು.

ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಆಕರ್ಷಕವಾಗಿ ನಿರ್ಮಿಸಿರುವ ಯುದ್ಧ ಟ್ಯಾಂಕರ್, ಯುದ್ಧ ವಿಮಾನ ಮುಂತಾದ ರಕ್ಷಣಾ ಪಡೆಯ ಸ್ಮಾರಕಗಳನ್ನು ಅವಲೋಕಿಸಿದರು.

general timmanna

ಪ್ರಥಮ ಮಹಿಳೆ ಶ್ರೀಮತಿ ಸವಿತಾ ಕೋವಿಂದ್, ಸೇನಾಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಅರವಿಂದ್ ಲಿಂಬಾವಳಿ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಹ್ಮಣಿ, ವೀಣಾ ಅಚ್ಚಯ್ಯ, ಎಫ್.ಎಂ.ಸಿ.ಜಿ.ಟಿ. ವೇದಿಕೆ ಅಧ್ಯಕ್ಷರಾದ ನಿವೃತ್ತ ಕೊಲೊನಿಯಲ್ ಕೆ.ಸಿ. ಸುಬ್ಬಯ್ಯ, ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಲ್ಲಾ ಪಂಚಾಯತ್ ಸಿ.ಇ.ಒ. ಭನ್ವರ್ ಸಿಂಗ್ ಮೀನಾ, ಮತ್ತಿತರರು ಉಪಸ್ಥಿತರಿದ್ದರು.

saraswathi
Share This Article
Leave a comment