ನ್ಯೂಸ್ ಸ್ನ್ಯಾಪ್
ಮುಂಬೈ
‘ಭಾರತದಲ್ಲಿ ಜೂನ್ ತಿಂಗಳ ಒಟ್ಟು ದೇಶಿಯ ಉತ್ಪನ್ನ 23.9 ರಷ್ಟು ಕುಸಿತ ಕಂಡಿರುವುದು ಬಹಳ ಆತಂಕಕಾರಿ ಬೆಳವಣಿಗೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದರು.
ಇಂತಹ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಚಿಂತನಶೀಲ ಹಾಗೂ ಸಕ್ರಿಯ ಸರ್ಕಾರವಾಗಬೇಕಾದ ಅವಶ್ಯಕತೆ ಇದೆ ಎಂದೂ ಸಹ ಹೇಳಿದರು.
‘ಅತೀ ಹೆಚ್ಚು ಕರೋನಾ ಸೋಂಕು ಪ್ರಕರಣಗಳನ್ನು ಹೊಂದಿದ್ದ ಇಟಲಿ ಹಾಗೂ ಅಮೇರಿಕಗಳ ಜಿಡಿಪಿಯು ಕ್ರಮವಾಗಿ 12.4 ಹಾಗೂ 9.5 ರಷ್ಟು ಕುಸಿತ ಕಂಡಿದೆ. ಭಾರತದ ಪ್ರಮಾಣ 23.9 ರಷ್ಟಿದೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು ಎಂದು ರಘುರಾಮ್ ಅವರು ತಮ್ಮ ಲಿಂಕ್ ಡಿನ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ಕರೋನಾವು ಭಾರತದಲ್ಲಿ ಇನ್ನೂ ಉಲ್ಬಣದ ಸ್ಥಿತಿಯಲ್ಲಿದೆ. ಹೀಗಾಗಿ ಜನರು ಅತಿಯಾದ ಖರ್ಚು-ವೆಚ್ಛಗಳಗೆ ಕಡಿವಾಣ ಹಾಕಲಿದ್ದಾರೆ. ಜನ ಸಂಪರ್ಕ ಹೆಚ್ಚಿರುವ ಹೋಟೆಲ್, ಸಿನಿಮಾ ಮುಂತಾದವುಗಳಿಗೆ ಸಂಬಂಧಿಸಿದಂತೆ ವ್ಯವಹಾರಗಳು ಇನ್ನೂ ಮಂದಗತಿಯಲ್ಲಿ ಸಾಗುವ ಸಂಭವವಿದೆ. ಅದಕ್ಕಾಗಿ ಮುಂದಿನ ಅಪಾಯ ಎದುರಿಸಲು ಸರ್ಕಾರ ತನ್ನ ಎಲ್ಲಾ ಸಂಪನ್ಮೂಲಗಳನ್ನು ವ್ಯಯಿಸದೆ, ಹೆಚ್ಚಿನ ಕ್ರಮಗಳನ್ನ ತೆಗೆದುಕೊಳ್ಳದೇ ಸುಮ್ಮನಿದೆ. ಈ ತಂತ್ರ ಸರ್ಕಾರಕ್ಕೆ ಹಾನಿ ಮಾಡಬಹುದು’ ಎಂದು ಅವರು ಬರೆದುಕೊಂಡಿದ್ದಾರೆ.
‘ಸರ್ಕಾರವು ಸೂಕ್ತ ಪರಿಹಾರ ಕ್ರಮಗಳನ್ನು ಹೊಂದದೇ ಇದ್ದರೆ ಆರ್ಥಿಕ ಬೆಳವಣಿಗೆಗೆ ಗಂಭೀರ ಹಾನಿಯಾಗುತ್ತದೆ’ ಎಂದೂ ಅವರು ಹೇಳಿದ್ದಾರೆ. ಸದ್ಯ ರಘುರಾಮ್ ರಾಜನ್ ಅವರು ಚಿಕ್ಯಾಗೋ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
More Stories
ಮಂಗೋಟೆ ಶ್ರೀ ಮುರುಗೆಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ಉದ್ಯೋಗ ಮೇಳ
ಅನಾರೋಗ್ಯ ದಿಂದ ಬಳಲುತ್ತಿರುವ ನಟಿ ಸಂಜನಾ ಮತ್ತೆ ಆಸ್ಪತ್ರೆಗೆ ದಾಖಲು
ಮದ್ದೂರಿನ ಮಹಿಳೆ ಮೇಲೆ ಅತ್ಯಾಚಾರ , ಕೊಲೆ ಮಾಡಿದ್ದ ಇಬ್ಬರು ದುಷ್ಕರ್ಮಿಗಳ ಬಂಧನ