ಉತ್ತರಪ್ರದೇಶದ ಎಲ್ಲಾ ಜೈಲುಗಳಲ್ಲಿ ಇನ್ನು ಮುಂದೆ ಗಾಯತ್ರಿ ಮಂತ್ರ ಮತ್ತು ಮಹಾ ಮೃತ್ಯುಂಜಯ ಮಂತ್ರಗಳು ಮೊಳಗಲಿವೆ.
ಜೈಲಿನಲ್ಲಿರುವ ಖೈದಿಗಳ ಮಾನಸಿಕ ಶಾಂತಿಗಾಗಿ ಈ ಮಂತ್ರಗಳನ್ನು ಮೊಳಗಿಸಲಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟನೆ ನೀಡಿದೆ.
ಈಗಾಗಲೇ ರಾಜ್ಯ ಕಾರಾಗೃಹ ಸಚಿವ ಧರಂವೀರ್ ಪ್ರಜಾಪತಿ, ಕಾರಾಗೃಹ ಆಡಳಿತ ಮಂಡಳಿಗೆ ಈ ಮಂತ್ರಗಳನ್ನು ಮೊಳಗಿಸುವಂತೆ ಆದೇಶಿಸಿದ್ದಾರೆ.
ಧರಂವೀರ್ ಪ್ರಜಾಪತಿ ಅವರ ಸೂಚನೆ ಮೇರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಯತ್ರಿ, ಮಹಾಮೃತ್ಯುಂಜಯ ಮಂತ್ರಗಳು ಕೇಳಿ ಬರುತ್ತಿವೆ.
ಈ ಮಂತ್ರಗಳ ಪಠಣ ಮಾಡುವುದರಿಂದ ಖೈದಿಗಳಿಗೆ ನೆಮ್ಮದಿ ಸಿಗುತ್ತದೆ. ಜೈಲಿನಿಂದ ಹೊರಬಂದು ಉತ್ತಮ ನಾಗರಿಕರಾಗುತ್ತಾರೆ. ಜೊತೆಗೆ ಅವರು ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕ ಹೊಂದಿರುತ್ತಾರೆ ಎಂಬುದು ಸರ್ಕಾರದ ನಂಬಿಕೆ. ಆದ್ದರಿಂದ ಕಾರಾಗೃಹಗಳಲ್ಲಿ ಈ ಮಂತ್ರಗಳ ರಾಗಗಳನ್ನು ನುಡಿಸಲು ಸರ್ಕಾರ ನಿರ್ಧರಿಸಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ