‘ಗಟ್ಟಿಮೇಳ’ ನಟ ರಕ್ಷಿತ್ ಗೌಡ ಸೇರಿ 7 ಮಂದಿ ​​ಕುಡಿದು ಗಲಾಟೆ: FIR ದಾಖಲು

Team Newsnap
1 Min Read

ಗಟ್ಟಿಮೇಳ ಧಾರವಾಹಿ ನಾಯಕ ನಟ ರಕ್ಷ್​ ಅಲಿಯಾಸ್​ ರಕ್ಷಿತ್ ಗೌಡ ಹಾಗೂ ಅವರ 7 ಮಂದಿ ಗ್ಯಾಂಗ್​ ನಗರದ ಜಿಂಜರ್ ಲೇಕ್ ವ್ಯೂ ಹೋಟೆಲ್​ ಒಂದರಲ್ಲಿ ಗಲಾಟೆ ನಡೆಸಿದೆ

ಶೂಟಿಂಗ್ ಮುಗಿದ ಮೇಲೆ ಹೋಟೆಲ್​​ನಲ್ಲಿ ಪಾರ್ಟಿ ಮಾಡಿ ಗಲಾಟೆ ಮಾಡಿದ್ದಾರೆ ಎಂದು ಗೊತ್ತಾಗಿದೆ ನಟರಾದ ರಕ್ಷಿತ್, ಅಭಿಷೇಕ್, ರಂಜನ್, ಅನುಷಾ, ಶರಣ್ಯ ಸೇರಿದಂತೆ 7 ಮಂದಿ ಕುಡಿದುಕೊಂಡು ಗಲಾಟೆ ಮಾಡಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ ವಿಧಿಸಿದೆ. ಹೀಗಿದ್ದೂ ರಕ್ಷಿತ್ ಗ್ಯಾಂಗ್​ ಕೊರೊನಾ ನಿಯಮವನ್ನ ಗಾಳಿಗೆ ತೂರಿ ಗಲಾಟೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

7 ಮಂದಿ ವಿರುದ್ಧ ಎಫ್​ಐಆರ್ಗ ಲಾಟೆ ಹಿನ್ನೆಲೆಯಲ್ಲಿ ಕೆಂಗೇರಿ ಠಾಣೆಯ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ತಿಳಿ ಹೇಳುವ ಪ್ರಯತ್ನ ಮಾಡಿದರು . ಆದರೆ ರಕ್ಷಿತ್ ಟೀಂ, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದೆ. ಇನ್ನು ಸ್ಥಳೀಯರು ನೀಡಿದ ದೂರಿನ ಪ್ರಕಾರ, ಪೊಲೀಸರು ಎಫ್​​ಐಆರ್ ದಾಖಲಿಸಿದ್ದಾರೆ. 7 ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Share This Article
Leave a comment