ನಿನ್ನೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾದ ಗಾನ ಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅಂತ್ಯ ಕ್ರಿಯೆ
ಚೆನ್ನೈನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಪುತ್ರ ಚರಣ್ ನೆರವೇರಿಸಿದರು.
ಸಹಸ್ರಾರು ಅಭಿಮಾನಿಗಳ ಅಶ್ರುತರ್ಪಣ ನಡುವೆ ಬಾಲು ಮಣ್ಣಿನಲ್ಲಿ ಲೀನವಾದರು.
ಕೊರೋನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಎಸ್‌ಪಿಬಿ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಗುಣಮುಖರಾಗದೇ ನಿನ್ನೆ ಮಧ್ಯಾಹ್ನ ವಿಧಿವಶರಾದರು.
ಎಸ‌್ ಪಿಬಿಯರವರ ನಿಧನದ ಸುದ್ದಿ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಪ್ರಧಾನಿ ಮೋದಿ ಸೇರಿದಂತೆ, ಅನೇಕ ರಾಜಕೀಯ ಗಣ್ಯರು ಶಾಂತಿ ಕೋರಿದ್ದಾರೆ. ಭಾರತೀಯ ಚಿತ್ರರಂಗದ ಹಿರಿಯರಾದ ಅಮಿತಾಭ್, ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ನಂದಮೂರಿ ಬಾಲಕೃಷ್ಣ, ಸಂಗೀತ ಕ್ಷೇತ್ರದ ದಿಗ್ಗಜರಾದ ಹಂಸಲೇಖ, ಇಳಯರಾಜ, ಎಆರ್ ರೆಹಮಾನ್, ಮಣಿಶರ್ಮ, ಎಂ ಎಂ ಕೀರವಾಣಿ, ಆಶಾ ಭೋಂಸ್ಲೆ, ರಾಜೇಶ್ ಕೃಷ್ಣನ್ ಮುಮನತಾದ ಗಣ್ಯರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಇಂದು ನಡೆಯುತ್ತಿರುವ ಎಸ‌್ ಪಿಬಿ ಅಂತ್ಯಕ್ರಿಯೆಗೆ ಚಿತ್ರರಂಗದ ಗಣ್ಯರು, ಕಲಾವಿದರು, ಸಂಗೀತ ನಿರ್ದೇಶಕರು, ಗಾಯಕರು ಅಂತಿಮ ನಮನ ಸಲ್ಲಿಸಿದರು. ಸರ್ಕಾರಿ ಸಕಲ ಗೌರವಗಳೊಂದಿಗೆ ಕುಶಾಲ ತೋಪುಗಳನ್ನು ಹಾರಿಸಲಾಯಿತು.
ನಂತರ ಆಂದ್ರ ಬ್ರಾಹ್ಮಣ ಸಂಪ್ರದಾಯ ದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ