ಮೈಸೂರಿನಲ್ಲಿ ಗ್ಯಾಂಗ್ ವಾರ್ – ಅವ್ವ ಮಾದೇಶ್ ಬಂಟನ ಬರ್ಬರ ಹತ್ಯೆ

Team Newsnap
1 Min Read
Gang War in Mysore – Brutal killing of Avva Madesh close man ಮೈಸೂರಿನಲ್ಲಿ ಗ್ಯಾಂಗ್ ವಾರ್ – ಅವ್ವ ಮಾದೇಶ್ ಬಂಟನ ಬರ್ಬರ ಹತ್ಯೆ

ಮೈಸೂರು : ಮೈಸೂರಿನಲ್ಲಿ ಮತ್ತೆ ಆರಂಭವಾದ ಗ್ಯಾಂಗ್‌ವಾರ್ ನಲ್ಲಿ, ರೌಡಿ ಶೀಟರ್ ಒಬ್ಬನನ್ನು ಗುರುವಾರ ಸಂಜೆ ಬರ್ಬರ ಹತ್ಯೆ ನಡೆದಿದೆ.

ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಂದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಈತ ಮಾಜಿ ನಗರ ಪಾಲಿಕೆ ಸದಸ್ಯ ಅವ್ವ ಮಾದೇಶ್ ಆಪ್ತ ಎಂದು ತಿಳಿಬಂದಿದೆ.

ಮಚ್ಚು ಲಾಂಗ್ ಹಿಡಿದುಕೊಂಡು ದ್ವಿಚಕ್ರ ವಾಹನದಲ್ಲಿ ಬಂದ 6 ಜನ ದುಷ್ಕರ್ಮಿಗಳು ಚಂದುನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಹುಣಸೂರಿನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಂದು, ಕೆಲ ದಿನಗಳ ಹಿಂದೆಯಷ್ಟೇ ಕೇಸ್ ಖುಲಾಸೆಯಾಗಿ ಜೈಲಿನಿಂದ ಬಿಡುಗಡೆಯಾಗಿದ್ದ.

ಇದೀಗ ಚಂದು ಕೊಲೆಯಾಗಿದ್ದು, ಪಡುವಾರಳ್ಳಿಯ ದೇವು ಕೊಲೆಗೆ ಪ್ರತೀಕಾರ ತೀರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಹಣಕಾಸು ಖಾತೆಗೆ ಸಿದ್ದು ಪಟ್ಟು: ಡಿಕೆಗೆ ನೀರಾವರಿ, ಬೆಂಗಳೂರು ಅಭಿವೃದ್ದಿ ಖಾತೆ

ಸದ್ಯ ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

Share This Article
Leave a comment