ಮದ್ದೂರು : 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮದ್ದೂರಿನಲ್ಲಿ ಜರುಗಿದೆ .
ಅಪ್ರಾಪ್ತೆಯನ್ನು ಸಹಪಾಠಿಗಳೇ ಪುಸಲಾಯಿಸಿ ಕರೆತಂದು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಕಿರಾತಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಕೃತ್ಯದ ವೀಡಿಯೋ ಮಾಡಿದ್ದಾರೆ.
ಪೊಲೀಸರು ಮೂವರು ಆರೋಪಿಗಳಾದ ಪುನೀತ್, ಮಂಜುನಾಥ್ ಹಾಗೂ ಸಿದ್ದರಾಜು ಬಂಧಿತರು .
ಮೂವರು ಕೂಡಾ ಮದ್ದೂರು ತಾಲೂಕಿನವರು, ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.
ಪ್ರಕರಣದ ಮೊದಲ ಆರೋಪಿ ಪುನೀತ್ ಮೈಸೂರಿನ ಯುವ ದಸರಾದಲ್ಲಿ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ಆಕೆಯನ್ನು ಪ್ರೀತಿಸುತ್ತಿರುವುದಾಗಿ ನಂಬಿಸಿ ಸಲುಗೆ ಬೆಳೆಸಿದ್ದ. ಬಳಿಕ ನವೆಂಬರ್ 4 ರಂದು ಮದ್ದೂರಿನ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಈ ವೇಳೆ ಕಿರಾತಕರು ಕೃತ್ಯದ ವೀಡಿಯೋವನ್ನು ಕೂಡಾ ಮಾಡಿದ್ದಾರೆ. ಬಳಿಕ ಸಂತ್ರಸ್ತೆಯ ಮೊಬೈಲ್‌ಗೆ ವೀಡಿಯೋವನ್ನು ಕಳುಹಿಸಿ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೇ ಕರೆದಾಗಲೆಲ್ಲಾ ಬರುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.ಟಿಪ್ಪು ಜಯಂತಿಗೆ ಶ್ರೀರಂಗಪಟ್ಟಣದಲ್ಲಿ ನಿರ್ಬಂಧ – ನಿಷೇಧಾಜ್ಞೆ ಜಾರಿ
ಇದಾದ ಬಳಿಕ ಅಪ್ರಾಪ್ತೆ ನಡೆದ ಘಟನೆ ಬಗ್ಗೆ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ನಂತರ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಇದರ ಅನ್ವಯ ಮೂವರನ್ನು ಬಂಧಿಸಿದ್ದಾರೆ. ಅತ್ಯಾಚಾರ, ಪೋಕ್ಸೊ, ಆಟ್ರಾಸಿಟಿ ಸೆಕ್ಷನ್ ಅಡಿ ಕೇಸ್ ದಾಖಲಿಸಲಾಗಿದೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು