ಮದ್ದೂರು ತಾಲೂಕಿನಲ್ಲಿ ಜೆಡಿಎಸ್ ನಾಯಕರಿಂದ ಬರ ಅಧ್ಯಯನ ಆರಂಭ

Team Newsnap
1 Min Read

ಮದ್ದೂರು : ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜನತಾದಳ (ಎಸ್)ಪಕ್ಷದ ನಾಯಕರು ಬರ ಪರಿಸ್ಥಿತಿ ಅಧ್ಯಯನವನ್ನು ಮದ್ದೂರಿನಿಂದ ಆರಂಭಿಸಿದರು .

ತಾಲೂಕಿನ ಬರಪೀಡಿತ ಪ್ರದೇಶಹೂತಗೆರೆ , ಅಂಕನಾಥಪುರ, ಹರಕನಹಳ್ಳಿ, ಮಲ್ಲನಕುಪ್ಪೆ, ಕೆ ಹೊನ್ನಲಗೆರೆ, ಎಸ್.ಐ ಹಾಗಲಹಳ್ಳಿ ಇತರೆ ಬರ ಪೀಡಿತ ಪ್ರದೇಶಕ್ಕೆ ತೆರಳಿದ ತಂಡ ರೈತರ ಜಮೀನು ಗಳಲ್ಲಿರುವ ಬೆಳೆಗಳ ಪರಿಸ್ಥಿತಿ ವೀಕ್ಷಿಸಿ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ಮಾಹಿತಿ ಪಡೆಯಿತು.

ಮಾಜಿ ಸಚಿವಡಿ.ಸಿ ತಮ್ಮಣ್ಣ, ಶಾಸಕ ಮಂಜು,ಮಾಜಿ ಶಾಸಕರಾದ ಸುರೇಶ್ ಗೌಡ, ಅನ್ನದಾನಿ ನೇತೃತ್ವದಲ್ಲಿ ಬರಹ ದಿನದ ತಂಡ ಹೂತಗೆರೆಗೆ ಬೇಟಿ ನೀಡಿ ರೈತ ಬಕಪ್ಪನ ಜಮೀನಿನಲ್ಲಿ ರಾಗಿ ತೆನೆ ವೀಕ್ಷಣೆ ಮಾಡಿತು.

ತಂಡವು ರೈತರ ಜಮೀನುಗಳಿಗೆ ಭೇಟಿ ಕೊಟ್ಟು ರೈತರ ಸಮಸ್ಯೆ ಆಲಿಸಿ ಬರ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.ಮದ್ದೂರಿನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ – ಮೂವರ ಬಂಧನ

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ ಶ್ರೀಕಂಠೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶನ , ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಮಾದನಾಯಕನಹಳ್ಳಿ ರಾಜಣ್ಣ ಇತರರಿದ್ದರು .

Share This Article
Leave a comment