December 19, 2024

Newsnap Kannada

The World at your finger tips!

puneet , power star , sandalwood

'Gandhada Gudi', Power Star -lightning ,Trekking, Driving, Dancing.... ‘ಗಂಧದ ಗುಡಿ’ಯಲ್ಲಿ ಪವರ್ ಸ್ಟಾರ್ ಮಿಂಚು-ಟ್ರೆಕ್ಕಿಂಗ್, ಡ್ರೈವಿಂಗ್, ಡ್ಯಾನ್ಸಿಂಗ್​

‘ಗಂಧದ ಗುಡಿ’ಯಲ್ಲಿ ಪವರ್ ಸ್ಟಾರ್ ಮಿಂಚು-ಟ್ರೆಕ್ಕಿಂಗ್, ಡ್ರೈವಿಂಗ್, ಡ್ಯಾನ್ಸಿಂಗ್​…..

Spread the love

ಪವರ್​ಸ್ಟಾರ್ ( Power Star )ಪುನೀತ್ ರಾಜ್ ಕುಮಾರ್ ( Puneeth Raj Kumar ) ನೆನಪು ಮಾತ್ರ ಇನ್ನೂ ಮಾಸಿಲ್ಲ, ಪುನೀತ್​ ಅವರ ಕನಸಿನ ಕೂಸು ‘ಗಂಧದಗುಡಿ’ ( Gandhada Gudi ) ಟ್ರೇಲರ್ ಇಂದು ಲಾಂಚ್ ಆಗಿದೆ.

ಇಂದು ಬೆಳಗ್ಗೆ 10 ಗಂಟೆ 19 ನಿಮಿಷ 10 ಸೆಕೆಂಡಿಗೆ PRK Audio ಯೂಟ್ಯೂಬ್ ( YouTube ) ಚಾನೆಲ್​ನಲ್ಲಿ ಗಂಧದಗುಡಿ ಟ್ರೈಲರ್ ( Trailer )​ ರಿಲೀಸ್​ ಆಗಿದೆ. ಅಲ್ಲದೇ ಕೆಜಿ ರಸ್ತೆಯ ನರ್ತಕಿ ಥಿಯೇಟರ್ ನಲ್ಲಿ ರಿಲೀಸ್ ಟ್ರೈಲರ್ ಬಿಡುಗಡೆ ಮಾಡಲಾಗಿದೆ.ಇದನ್ನು ಓದಿ –ಮೇಲುಕೋಟೆಯ ರಾಜಗೋಪುರದಲ್ಲಿ ಬಾರ್ ಸೆಟ್ – ನಟ ನಾಗಚೈತನ್ಯ ಚಿತ್ರ ತಂಡದಿಂದ ಎಡವಟ್ಟು

ಪುನೀತ್ ರಾಜ್ ಕುಮಾರ್​ ( Puneeth Raj kumar ) ನಟಿಸಿರುವ ಕೊನೆಯ ಚಿತ್ರ ‘ಗಂಧದಗುಡಿ’ ಇದೇ ಅಕ್ಟೋಬರ್ ( October ) 28ಕ್ಕೆ ರಿಲೀಸ್​ ಆಗ್ತಿದೆ. ವೈಲ್ಡ್​ಫೋಟೋಗ್ರಾಫರ್ ಅಮೋಘವರ್ಷ ಈ ಚಿತ್ರ ನಿರ್ದೇಶನ ಮಾಡಿದ್ದಾರೆ, ಅರಣ್ಯ ಜಗತ್ತನ್ನು ರಾಜಕುಮಾರನೊಂದಿಗೆ ಪರಿಚಯಿಸುವ ಪ್ರಯತ್ನವಿದೆ.

puneeth rajkumar ashwini puneethrajkumar

ಅಕ್ಟೋಬರ್ 29ಕ್ಕೆ ಅಪ್ಪು ಮೊದಲ ವರ್ಷ ಪುಣ್ಯ ಸ್ಮರಣೆ ದಿನ ಅದಕ್ಕೂ ಒಂದು ದಿನ ಮುಂಚೆ ಅಂದ್ರೆ ಅಕ್ಟೋಬರ್ 28ಕ್ಕೆ ಗಂಧದ ಗುಡಿ ರಿಲೀಸ್ ( Release )ಆಗಲಿದೆ. ಪುನೀತ್ ರಾಜ್ ಕುಮಾರ್ ಅಗಲಿ ವರ್ಷ ಸಮೀಪಿಸುತ್ತಿದೆ. ಅಕ್ಟೋಬರ್ 29ಕ್ಕೆ ಅಪ್ಪು ಅವ್ರ ಮೊದಲ ವರ್ಷ ಪುಣ್ಯ ಸ್ಮರಣೆ ಇರಲಿದ್ದು, ಅದಕ್ಕೂ ಒಂದು ದಿನ ಮುಂಚೆ ಅಂದ್ರೆ ಅಕ್ಟೋಬರ್ 28ಕ್ಕೆ ಗಂಧದ ಗುಡಿ ರಿಲೀಸ್ ಆಗಲಿದೆ.

Copyright © All rights reserved Newsnap | Newsever by AF themes.
error: Content is protected !!