ಇಂದಿನಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲ ಅಧಿವೇಶನ ಡಿಸೆಂಬರ್ 23ರ ವರೆಗೆ ನಡೆಯಲಿದೆ.
ಅಧಿವೇಶನದಲ್ಲಿ 29ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗೋ ಸಾಧ್ಯತೆ ಇದೆ. ಪ್ರಮುಖವಾಗಿ ಕೃಷಿ
ಕಾನೂನು ರದ್ದು, ಕ್ರಿಪ್ಟೋ ಕರೆನ್ಸಿ ನಿಯಂತ್ರಣ, ಕೆಲ ಸರ್ಕಾರಿ ಬ್ಯಾಂಕ್
ಖಾಸಗೀಕರಣ, ಡ್ರಗ್ಸ್ ನಿಯಂತ್ರಣ ಸೇರಿ ಹಲವು ಮಹತ್ವದ ಮಸೂದೆಗಳು ಈ ಬಾರಿ ಮಂಡನೆಯಾಗುತ್ತಿವೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥಿತ ಅಧಿವೇಶನ ನಡೆಸುವುದಕ್ಕಾಗಿ ಸರ್ವಪಕ್ಷಗಳ ಸಾಂಪ್ರದಾಯಿಕ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ ಸಭೆಗೆ ಗೈರಾಗಿದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಚಿವ ಪಿಯೂಷ್ ಗೋಯಲ್ ಸರ್ಕಾರದಿಂದ ಹಾಜರಾಗಿದ್ದರು.
ಮೋದಿ ಗೈರಾಗಿರುವ ಬಗ್ಗೆ ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸೇರಿ ವಿಪಕ್ಷ ನಾಯಕರು ಖಂಡಿಸಿದರು.
ಇನ್ನು ಪ್ರಮುಖವಾಗಿ ಮೂರು ಕೃಷಿ ಕಾಯಿದೆಗಳ ರದ್ದತಿ ಮಸೂದೆ, ಕ್ರಿಪ್ರೋ ಕರೆನ್ಸಿ ಅಧೀಕೃತ ನಿಯಂತ್ರಣ ಮಸೂದೆ ಬಗ್ಗೆಯೂ ಕೇಂದ್ರ ಮಸೂದೆ ಮಂಡಿಸುವುದಕ್ಕಾಗಿ ಅಣಿಯಾಗಿದೆ. ಹೀಗಾಗಿ ಇಡೀ ದೇಶದ ಚಿತ್ತ ಚಳಿಗಾಲದ ಅಧಿವೇಶನದತ್ತ ನೆಟ್ಟಿದೆ.
ಈ ನಡುವೆ ವಿಪಕ್ಷಗಳಿಂದ ಪ್ರತಿಭಟನೆಯ ಬಿಸಿ ಇಂದು ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಎಲ್ಲ ವಿಪಕ್ಷಗಳು ಭಾರೀ ಸಿದ್ಧತೆ ನಡೆಸಿವೆ. ಇಂಧನ ಬೆಲೆ ಏರಿಕೆ, ಹಣದುಬ್ಬರ, ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ, ಲಖೀಂಪುರ ಖೇರಿ ದುರ್ಘಟನೆ, ಸೇರಿ ಹಲವು ವಿಚಾರಗಳನ್ನ ಮುಂದಿಟ್ಟುಕೊಂಡು ಕೇಂದ್ರವನ್ನ ತಾರಟೆಗೆ ತೆಗೆದುಕೊಳ್ಳೋದಕ್ಕೆ ವಿಪಕ್ಷಗಳು ತುದಿಗಾಲಲ್ಲಿ ನಿಂತುಕೊಂಡಿವೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು