ಇಂದಿನಿಂದ ಎಲ್‍ಪಿಜಿ ಸಿಲಿಂಡರ್,ಹಾಲು,ಬ್ಯಾಂಕಿಂಗ್ ಚಾರ್ಜ್ ತುಟ್ಟಿ

Team Newsnap
1 Min Read

ಹಾಲು, ಎಲ್‍ಪಿಜಿ ಸಿಲಿಂಡರ್ ಮತ್ತು ಬ್ಯಾಂಕ್ ಸೇವೆಗಳ ಶುಲ್ಕ ಇಂದಿನಿಂದ ಏರಿಕೆಯಾಗಲಿದೆ.

ಅಮೂಲ್ ಗೋಲ್ಡ್ 58 ರು. ಪ್ರತಿ ಲೀಟರ್, ಅಮೂಲ್ ತಾಜಾ 46 ರು. ಪ್ರತಿ ಲೀ., ಅಮೂಲ್ ಶಕ್ತಿ 52 ರು ಪ್ರತಿ ಲೀಟರ್ ಗೆ ಗ್ರಾಹಕರಿಗೆ ಲಭ್ಯವಾಗಲಿದೆ.

ಅಮೂಲ್ ಬಳಿಕ ಇನ್ನುಳಿದ ಹಾಲು ಉತ್ಪಾದಕ ಕಂಪನಿಗಳು ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

ದೆಹಲಿ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಅಮೂಲ್ ಉತ್ಪನ್ನಗಳು ತುಟ್ಟಿಯಾಗಲಿವೆ. ಪ್ರತಿ ಲೀಟರ್ ಹಾಲಿನ ಮೇಲೆ ಎರಡು ರೂಪಾಯಿಯನ್ನು ಅಮೂಲ್ ಹೆಚ್ಚಳ ಮಾಡಿಕೊಂಡಿದೆ. ಅಮೂಲ್ ಒಂದೂವರೆ ವರ್ಷದ ಬಳಿಕ ತನ್ನ ಉತ್ಪನ್ನಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿಕೊಂಡಿದೆ. ಬುಧವಾರವೇ ಅಮೂಲ್ ತನ್ನ ಬೆಲೆ ಏರಿಕೆಯ ಮಾಹಿತಿಯನ್ನು ನೀಡಿತ್ತು.

ಬ್ಯಾಂಕ್ ಚಾರ್ಜ್ ಹೆಚ್ಚಳ:

ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ತನ್ನ ಸೇವಾ ಶುಲ್ಕವನ್ನು ಹೆಚ್ಚಿಸಿಕೊಂಡಿದೆ. ಈಗ ಗ್ರಾಹಕರು ಎಟಿಎಂನಿಂದ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಬಹುದು. ನಾಲ್ಕಕ್ಕಿಂತ ಹೆಚ್ಚಿನ ವಹಿವಾಟು ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ವಹಿವಾಟಿನ ಮೇಲೆ 15 ರೂ.ಶುಲ್ಕವನ್ನು ಗ್ರಾಹಕರು ಪಾವತಿಸಬೇಕು.

Share This Article
Leave a comment