ವಿಶ್ವ ಪರಿಸರ ದಿನಾಚರಣೆ : ಬಿಬಿಎಂಪಿ ಅರಣ್ಯ ಘಟಕ ವತಿಯಿಂದ ಉಚಿತ ಸಸಿ ವಿತರಣೆ

Team Newsnap
1 Min Read

ಜೂನ್ 5 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗದ ಸಸ್ಯಕ್ಷೇತ್ರಗಳಿಂದ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲು ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ನಿರ್ದೇಶನ ನೀಡಿರುತ್ತಾರೆ.

‘ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುವುದು. ಈ ಸಂಬಂಧ ಆಸಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಉಚಿತವಾಗಿ ಸಸಿಗಳನ್ನು ಪಡೆಯಬಹುದು ಎಂದು ತಿಳಿಸಿರುತ್ತಾರೆ.

ಇದನ್ನು ಓದಿ – 10 ದಿನ ವಿದೇಶ ಪ್ರವಾಸಕ್ಕೆ ಹೋಗಿದ್ದ ಆರೋಗ್ಯ ಸಚಿವ ಡಾ ಸುಧಾಕರ್‌ಗೆ ಕೊರೊನಾ ಪಾಸಿಟಿವ್

ಪಾಲಿಕೆಯ ಅರಣ್ಯ ವಿಭಾಗದ ವಿವಿಧ ವಲಯಗಳ ವ್ಯಾಪ್ತಿಯಲ್ಲಿರುವ ಸಸ್ಯಕ್ಷೇತ್ರಗಳಲ್ಲಿ ‘8×12’ ಅಳತೆಯ ವಿವಿಧ ಜಾತಿಯ ಸಸಿಗಳು ಲಭ್ಯವಿದ್ದು, ‘ವಿಶ್ವ ಪರಿಸರ ದಿನಾಚರಣೆ’ಅಂಗವಾಗಿ ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಸಸಿಗಳನ್ನು ನೆಟ್ಟು ಪೋಷಣೆ ಮಾಡಬಹುದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿರವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಸ್ಯಕ್ಷೇತ್ರಗಳ ವಿವರ

  • ಕೂಡ್ಲು – 7019196107
  • ಅಟ್ಟೂರು – 9480685196
  • ಜ್ಞಾನಭಾರತಿ ಆವರಣ – 9164042566
  • ಮಲ್ಲತ್ತಹಳ್ಳಿ – 9164042566
  • ಕೆಂಪಾಪುರ – 9480685196
  • ದೊಡ್ಡಬಸ್ತಿ – 9480685196

ಜೂನ್ 5ರ ವಿಶ್ವ ಪರಿಸರ ದಿನಾಚರಣೆಯ ದಿನ ಉಚಿತ ಸಸಿಗಳನ್ನು ಬಿಬಿಎಂಪಿ ವ್ಯಾಪ್ತಿಯ ಪರಿಸರ ಪ್ರೇಮಿಗಳು ಪಡೆಯಬಹುದಾಗಿದೆ.

Share This Article
Leave a comment