1 ವರ್ಷ ಉಚಿತ ಆಹಾರ, ಕೇಂದ್ರ ವೆಚ್ಚ ಭರಿಸಲಿದೆ: ನಿರ್ಮಲಾ ಸೀತಾರಾಮನ್‌

Team Newsnap
1 Min Read
Free food for 1 year, Center will bear the cost: Nirmala Sitharaman 1 ವರ್ಷ ಉಚಿತ ಆಹಾರ, ಕೇಂದ್ರ ವೆಚ್ಚ ಭರಿಸಲಿದೆ: ನಿರ್ಮಲಾ ಸೀತಾರಾಮನ್‌

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿ ಬಡವರಿಗೆ ಇನ್ನೂ ಒಂದು ವರ್ಷಗಳ ಕಾಲ ಉಚಿತ ಆಹಾರ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಘೋಷಿಸಿದ್ದಾರೆ.

ತಮ್ಮ ಬಜೆಟ್‌ ಮಂಡನೆ ವೇಳೆಯಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, 28 ತಿಂಗಳ ಕಾಲ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.ಬಜೆಟ್ 2023: ಮಧ್ಯಮ ವರ್ಗಕ್ಕೆ ಬಿಗ್​ ರಿಲೀಫ್, 5ರಿಂದ 7 ಲಕ್ಷದವರೆಗೆ ತೆರಿಗೆ ಇಲ್ಲ

ಕೋವಿಡ್‌ ಕಾಲದಲ್ಲಿ ಹಸಿವನ್ನು ನೀಗಿಸಿದ ಈ ಯೋಜನೆಯನ್ನು ಇನ್ನೂ ಒಂದು ವರ್ಷಗಳ ಕಾಲ ವಿಸ್ತರಿಸುತ್ತಿದ್ದೇವೆ. ಈ ಯೋಜನೆ ಜಾರಿಗೆ ಸರ್ಕಾರಕ್ಕೆ 2 ಲಕ್ಷ ಕೋಟಿ ರೂ. ಅಗತ್ಯವಿದ್ದು, ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.

ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ, ಉಜ್ವಲ ಭವಿಷ್ಯದತ್ತ ಸಾಗುತ್ತಿದೆ. 10 ವರ್ಷಗಳಲ್ಲಿ ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದೆ ಎಂದು ಸರ್ಕಾರದ ಸಾಧನೆಯನ್ನು ತಿಳಿಸಿದರು.

Share This Article
Leave a comment