January 11, 2025

Newsnap Kannada

The World at your finger tips!

WhatsApp Image 2022 12 13 at 10.24.24 PM

ರೋಟರಿ ಕ್ಲಬ್ ಆಪ್ ಹಂಪೆ- ಪರ್ಲ್ಸ್,ರೋಟರಿ ಕ್ಲಬ್ ಅಪ್ ವಿಜಯನಗರ ಹೆರಿಟೇಜ್ ವತಿಯಿಂದ ಉಚಿತ ಕಂಪ್ಯೂಟರ್ ವಿತರಣೆ

Spread the love

ವರದಿ : ಮುರುಳೀಧರ್ ನಾಡಿಗೇರ್
ವಿಜಯನಗರ – ಹೊಸಪೇಟೆ

ಬಡ,ಆಶ್ರಯವಿಲ್ಲದ ಮಕ್ಕಳಿಗೆ ಸಹಾಯ ಒದಗಿಸಿ ಸುವ್ಯವಸ್ಥಿತ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಜೀವನವನ್ನು ನಡೆಸುವ ದಾರಿ ಕಲ್ಪಿಸಲು ನೆರವಾಗುತ್ತಿರುವ ಸಂಸ್ಥೆ ವಿಜಯನಗರ ಹೊಸಪೇಟೆಯ ರೋಟರಿ ಕ್ಲಬ್ ಸಹಭಾಗಿಯಾಗಿ ಸ್ಥಾಪಿತವಾಗಿರುವ ರೋಟರಿ ಕ್ಲಬ್ ಅಫ್ ಹಂಪಿ ಪರ್ಲ್ಸ್ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ವಿಜಯನಗರ ಹೆರಿಟೇಜ್.

WhatsApp Image 2022 12 13 at 10.24.23 PM

ವಿಜಯನಗರ ಹೊಸಪೇಟೆಯ ರೋಟರಿ ಕ್ಲಬ್ ಆವರಣದಲ್ಲಿ ಮಂಗಳವಾರ ರೋಟರಿ ಕ್ಲಬ್ ಆಪ್ ಹಂಪೆ ಪರ್ಲ್ಸ್ ಸಮಿತಿಯ ಮುಖ್ಯಸ್ಥೆ ಶ್ರೀಮತಿ ಕಮಲಾ ಗುಮಾಸ್ತೆಯವರ ನೇತೃತ್ವದಲ್ಲಿ ಹೊಸಪೇಟೆ ಮತ್ತು ಸುತ್ತಮುತ್ತಲಿನ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಉಪಯೋಗಕ್ಕಾಗಿ 200 ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡುವುದರ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿ ದೀಪವಾದರು.

ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಆರ್ಥಿಕವಾಗಿ ಕಡು ಬಡತನದಲ್ಲಿ ಜೀವನ ಸಾಗಿಸುವುರ ಮೂಲಕ ವಿದ್ಯಾಭ್ಯಾಸದಲ್ಲಿ ಸರಿಯಾದ ಮಾರ್ಗದರ್ಶನ ಮತ್ತು ಸಹಾಯವಿಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ ಹಾಗಾಗಿ ಈ ಯೋಜನೆಯನ್ನು ನಮ್ಮ ಕ್ಲಬ್ ಹಾಕಿಕೊಂಡು ಕಾರ್ಯಗತಗೊಳಿಸಲು ಶ್ರಮಿಸುತ್ತಿರುವುದಾಗಿ ಶ್ರೀಮತಿ ಕಮಲಾ ಗುಮಾಸ್ತೆ ತಿಳಿಸಿದರು.

ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ಕಳೆದ 10 ತಿಂಗಳ ಹಿಂದೆ ಪ್ರಾರಂಭವಾದ ರೋಟರಿ ಕ್ಲಬ್ ಆಪ್ ಹಂಪೆ ಪರ್ಲ್ಸ್ ಕ್ಲಬ್ ಉದ್ಘಾಟನೆಯಾಗಿ ಸಮಾಜದ ಸಾಮಾಜಿಕ, ಆರೋಗ್ಯ,ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿಸಿ ಸಮಾಜದ ಶಾಲಾ ಕಾಲೇಜುಗಳ ಸಾಮಾಜಿಕ ಉನ್ನತಿಯನ್ನು ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಶ್ರೀಮತಿ ಕಮಲಾ ಗುಮಾಸ್ತೆ ಮತ್ತು ರೋಟರಿ ಕ್ಲಬ್ ಮುಖ್ಯಸ್ಥರ ಮುಂದಾಳತ್ವದಲ್ಲಿ ಅನೇಕ ಕಾರ್ಯಕ್ರಮ ಮಾಡುತ್ತಿದ್ದು ಎಲ್ಲರಿಗೂ ಮೆಚ್ಚುಗೆ ಉಂಟಾಗಿದೆ. ಜೊತೆಗೆ ರೋಟರಿ ಕ್ಲಬ್ ಅಪ್ ವಿಜಯನಗರ ಹೆರಿಟೇಜ್ ಕ್ಲಬ್ ಸದಸ್ಯರು ಸಹ ನಮ್ಮ ಜೊತೆ ಕೈಜೋಡಿಸಿ ಈ ಸಹಾಯವನ್ನು ಮಾಡಿರುವುದು ಸಂತಸವಾಗಿದೆ ಎಂದು ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟನೆ ಮಾಡಿದ ರೋಟರಿ ಕ್ಲಬ್ ಹೊಸಪೇಟೆಯ ಮುಖ್ಯಸ್ಥರು ಗಳಾದ ಶ್ರೀ ವಿಶ್ವನಾಥ್ ಕೆ ಜಾದವ್ ಮತ್ತು ಶ್ರೀ ತಿರುಪತಿ ನಾಯ್ಡು, ಶ್ರೀ ವಿ.ಜಿ ಶ್ರೀಕಾಂತ್ ರವರು ಶುಭಾಶಯ ತಿಳಿಸಿ ಕಾರ್ಯಕ್ರಮದ ಯಶಸ್ವಿಗೆ ಅಭಿನಂದನೆ ವ್ಯಕ್ತಪಡಿಸಿದರು.

ವೈಯಕ್ತಿಕವಾಗಿ , ಸಾಮಾಜಿಕವಾಗಿ ಮತ್ತು ಸಮೂಹದಲ್ಲಿ ಯಾವುದೇ ಆತಂಕವನ್ನು ಪಡದೆ ಗುರಿಯನ್ನು ಸಾಧಿಸಲು ಮಾಡುವ ಉಪಯುಕ್ತವಾದ ಮತ್ತು ಕೈಯಲ್ಲಿ ಆಗುವ ಕೆಲಸಗಳನ್ನು ಮಾಡಿ ಸಂತೋಷದ ಕಡೆ ಜೀವನವನ್ನು ಸಾಗಿಸುವ ಮಾರ್ಗದಲ್ಲಿ ಸಿಗುವ ಸವಲತ್ತುಗಳನ್ನು ಮಾಡಿದಾಗ ಅತಿಯಾದ ಆನಂದವಾಗುತ್ತದೆ, ನಮ್ಮ ಕೊಡುಗೆ ಉಪಯುಕ್ತವಾದರೆ ಕಾಲೇಜು ವಿದ್ಯಾರ್ಥಿಗಳಿಗೆ ಆಗುವ ಆನಂದವನ್ನು ನಾವು ಸಂತಸದಿಂದ ಸ್ವೀಕರಿಸಬಹುದು ಎಂದು ಶ್ರೀಮತಿ ಕಮಲಾ ಗುಮಾಸ್ತೆಯವರು ತಿಳಿಸಿದರು.

ಕಾರ್ಯಕ್ರಮ ದಲ್ಲಿ ಕೆಎಫ್ಐಎಲ್ ಲೇಡೀಸ್ ಕ್ಲಬ್ ಮುಖ್ಯಸ್ಥರು ಮತ್ತು ರೋಟರಿ ಹಂಪಿ ಪರ್ಲ್ಸ್ ಸದಸ್ಯರಾದ ಶ್ರೀಮತಿ ಲಕ್ಷ್ಮೀನಾರಾಯಣ, ಶ್ರೀಮತಿ ಸುಮಾನಾಗರಾಜ್ , ಹಂಪಿ ಪರ್ಲ್ಸ್ ಕ್ಲಬ್ ಮುಖ್ಯಸ್ಥರಾದ ಶ್ರೀಮತಿ ಪ್ರಿಯಾ ಗೌತಮ್,ಡಾ. ಪಲ್ಲವಿ ಅಮರನಾಥ್, ಶ್ರೀಮತಿ ಪಾವನ ನಾಯ್ಡು , ಶ್ರೀಮತಿ ಅಶ್ವಿನಿ ಕೊತ್ತುಂಬರಿ ಮತ್ತು ಕ್ಲಬ್ ಸದಸ್ಯರು ಭಾಗವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ಮುರುಘಾ ಮಠಕ್ಕೆ ಆಡಳಿತಾಧಿಕಾರಿ

ರೋಟರಿ ಕ್ಲಬ್ ಆಪ್ ಹಂಪಿ ಪರ್ಲ್ಸ್ ಮತ್ತು ರೋಟರಿ ಕ್ಲಬ್ ಅಪ್ ವಿಜಯನಗರ ಹೆರಿಟೇಜ್ ಇವರು ಹೊಸಪೇಟೆಯ ಸುತ್ತಮುತ್ತಲಿನ ಸರ್ಕಾರಿ ಕಾಲೇಜುಗಳಾದ ಕೂಡ್ಲಿಗಿ ಪಿ.ಯು. ಕಾಲೇಜ್, ಹಗರಿಬೊಮ್ಮನಹಳ್ಳಿ ಪಿ.ಯು ಕಾಲೇಜ್ ,ಕಂಪ್ಲಿ ಪಿ.ಯು ಕಾಲೇಜ್ ಮತ್ತು ಹಡಗಲಿ ಪಿ.ಯು ಕಾಲೇಜುಗಳಿಗೆ ಉಚಿತ ಕಂಪ್ಯೂಟರ್ ಹಂಚಿಕೆ ಮಾಡಿದರು.

Copyright © All rights reserved Newsnap | Newsever by AF themes.
error: Content is protected !!