ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮತ್ತು ಇತರರ ವಿರುದ್ಧ 1.51 ಕೋಟಿ ರು ವಂಚನೆ ಪ್ರಕರಣವೊಂದು ಮುಂಬೈನ ಬಾಂದ್ರಾ ಪೋಲಿಸ್ ಠಾಣೆಯಲ್ಲಿ ಭಾನುವಾರ ದಾಖಲಾಗಿದೆ
ಉದ್ಯಮಿ ನಿತಿನ್ ಬಾರೈ ನೀಡಿದ ದೂರಿನಲ್ಲಿ ಜುಲೈ 2014 ರಲ್ಲಿ,ಎಸ್ ಎಫ್ ಎಲ್ ಫಿಟ್ ನೆಸ್ ಕಂಪನಿಯ ನಿರ್ದೇಶಕ ಕಾಶಿಫ್ ಖಾನ್,ಶಿಲ್ಪ ಶೆಟ್ಟಿ, ರಾಜ್ ಕುಂದ್ರಾ ಮತ್ತು ಇತರರು ಲಾಭ ಗಳಿಸಲು ಉದ್ಯಮಕ್ಕೆ 1.51 ಕೋಟಿ ರೂಪಾಯಿ ಹೂಡಿಕೆ ಮಾಡುವಂತೆ ಕೇಳಿದರು ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಕಂಪನಿಯು ತನಗೆ ಫ್ರಾಂಚೈಸಿಯನ್ನು ನೀಡುತ್ತದೆ ಮತ್ತು ನೆರೆಯ ಪುಣೆಯ ಹಡಪ್‌ಸರ್ ಮತ್ತು ಕೋರೆಗಾಂವ್‌ನಲ್ಲಿ ಜಿಮ್ ಮತ್ತು ಸ್ಪಾ ತೆರೆಯುತ್ತದೆ ಎಂದು ತನಗೆ ಭರವಸೆ ನೀಡಲಾಯಿತು ಎಂದು ದೂರುದಾರ ಹೇಳಿಕೊಂಡಿದ್ದಾನೆ.
ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.ನಂತರ, ದೂರುದಾರ ತನ್ನ ಹಣವನ್ನು ಮರಳಿ ಕೇಳಿದಾಗ, ಆತನಿಗೆ ಬೆದರಿಕೆ ಹಾಕಲಾಗಿದೆ ಎಂದು ದೂರನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ, ಬಾಂದ್ರಾ ಪೊಲೀಸರು ಕೇಸು ದಾಖಲಿಸಿದ್ದಾರೆ
ಈ ವರ್ಷದ ಆರಂಭದಲ್ಲಿ ಅಶ್ಲೀಲ ವಿಡಿಯೋ ದಂಧೆಯಲ್ಲಿ ಜೈಲು ಪಾಲಾದ ರಾಜ್ ಕುಂದ್ರಾ ವಿರುದ್ಧದ ಮತ್ತೊಂದು ಪ್ರಕರಣ ಇದಾಗಿದೆ. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ