ನಿವೃತ್ತ ನೌಕರರನ್ನು ಟಾರ್ಗೆಟ್ ಮಾಡಿದ್ದ ಬ್ಯಾಂಕ್‍ನವರು, ಡಬಲ್ ಹಣ ನೀಡೋದಾಗಿ ಹಣ ಠೇವಣಿ ಮಾಡಿಸಿಕೊಂಡು ಅವಧಿ ಮುಗಿದ ಬಳಿಕ ಹಣ ನೀಡದೆ ಕಚೇರಿಯನ್ನು ಬಂದ್ ಮಾಡಿ ಎಸ್ಕೇಪ್ ಆಗಿದ್ದಾರೆ.
ರಾಮನಗರದ ಪಂಚವಟಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‍ನಿಂದ ಷೇರುದಾರಿಗೆ ಪಂಗನಾಮ ಹಾಕಲಾಗಿದೆ.ಶ್ರೀರಾಮ ದೇವರ ಬೆಟ್ಟ ಯೋಜನೆ ತಡೆಯಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್ ನಾರಾಯಣ್
ಹಣ ಕಳೆದುಕೊಂಡ ಷೇರುದಾರರು ಈಗ ಪೊಲೀಸರ ಮೊರೆಹೋಗಿದ್ದಾರೆ. ರಾಮನಗರದ ಐಜೂರಿನಲ್ಲಿರುವ ಪಂಚವಟಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿ ನೂರಾರು ಜನರು ಕೊಟ್ಯಂತರ ರೂ. ಹಣ ಹೂಡಿಕೆ ಮಾಡಿದ್ರು. ನಿವೃತ್ತ ನೌಕರನ್ನು ಟಾರ್ಗೆಟ್ ಮಾಡಿದ್ದ ಬ್ಯಾಂಕ್‍ನವರು ಡಬಲ್ ಹಣ ನೀಡೋದಾಗಿ ಹಣ ಠೇವಣಿ ಮಾಡಿಸಿಕೊಂಡು ಅವಧಿ ಮುಗಿದ ಬಳಿಕ ಹಣ ನೀಡದೇ ಕಚೇರಿಯನ್ನು ಬಂದ್ ಮಾಡಿ ಎಸ್ಕೇಪ್ ಆಗಿದ್ದಾರೆ. ಹೆಚ್ಚಿನ ಹಣದ ಆಸೆಗೆ ಹೂಡಿಕೆ ಮಾಡಿದ್ದ ಷೇರುದಾರರು ಇದ್ದ ಹಣವನ್ನು ಕಳೆದುಕೊಂಡು ಅತಂತ್ರರಾಗಿದ್ದಾರೆ.
ಠೇವಣಿ ಹಣ ಹಿಂಪಡೆಯಲು ಹೋದಾಗ ಷೇರುದಾರರನ್ನು ಸತಾಯಿಸಿದ ಬ್ಯಾಂಕ್‍ನ ಆಡಳಿತ ಮಂಡಳಿ ಈಗ ಹಣ ಹಿಂತಿರುಗಿಸದೆ ಎಸ್ಕೇಪ್ ಆಗಿದೆ ಎಂಬ ಆರೋಪವಿದೆ. ಜಿಲ್ಲೆಯಾದ್ಯಂತ ನಮ್ಮ ಬ್ರಾಂಚ್ ಇದೆ. ರಾಷ್ಟ್ರೀಕೃತ ಬ್ಯಾಂಕ್‍ಗಿಂತಲೂ ಹೆಚ್ಚಿನ ಬಡ್ಡಿ ನೀಡ್ತೇವೆ ಎಂದು ಬ್ಯಾಂಕ್‍ನವರು ಕೊಟ್ಯಂತರ ರೂ. ಪಡೆದಿದ್ದಾರೆ. ಆದ್ರೆ ಈಗ ಬೆಂಗಳೂರಿನ ಕಚೇರಿಯನ್ನೂ ಸಹ ಬಂದ್ ಮಾಡಿ ಆಡಳಿತ ಮಂಡಳಿಯವರು ಎಸ್ಕೇಪ್ ಆಗಿದ್ದಾರೆ.
ಈ ಸಂಬಂಧ ರಾಮನಗರ ಸೈಬರ್ ಕ್ರೈಂ ಬ್ರ್ಯಾಂಚ್‍ನಲ್ಲಿ 11 ಮಂದಿ ಷೇರುದಾರರು ದೂರು ನೀಡಿದ್ದು ಬ್ಯಾಂಕ್‍ನ 8 ಮಂದಿ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಾಮನಗರದ ಬ್ರಾಂಚ್‍ನ ಬ್ಯಾಂಕ್ ದಾಖಲೆಗಳನ್ನು ಸೀಜ್ ಮಾಡಿ ತನಿಖೆ ಕೈಗೊಂಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು