November 18, 2024

Newsnap Kannada

The World at your finger tips!

WhatsApp Image 2022 05 30 at 10.35.36 AM

Four Mumbai passengers and 22 passengers were identified as passengers

ನಾಲ್ವರು ಮುಂಬೈನವರು ಸೇರಿ 22 ಪ್ರಯಾಣಿಕರಿದ್ದ ವಿಮಾನ, ಪ್ರಯಾಣಿಕರ ಗುರುತು ಪತ್ತೆ

Spread the love

ನೇಪಾಳದಲ್ಲಿ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ವಿಮಾನ ಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಕೊವಾಂಗ್​ ಪರ್ವತ ಪ್ರದೇಶದಲ್ಲಿ ವಿಮಾನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಮೂಲದ ನಾಲ್ವರು ಪ್ರಯಾಣಿಕರು ಮುಂಬೈ ಮೂಲದವರೆಂದು ತಿಳಿದುಬಂದಿದೆ.

WhatsApp Image 2022 05 30 at 11.07.23 AM
plane crash

ಇದನ್ನು ಓದಿ –ಜೆಡಿಎಸ್ ನಿಂದ ರಾಜ್ಯಸಭೆಗೆ ಕುಪೇಂದ್ರ ರೆಡ್ಡಿ ಟಿಕೆಟ್ ಪೈನಲ್

ವಿಮಾನವು ಮುಸ್ತಾಂಗ್​​ ಜಿಲ್ಲೆಯಲ್ಲಿ ಹಾರಾಟ ನಡೆಸಿದ್ದು ಕಾಣಿಸಿಕೊಂಡ ಬಳಿಕ ಧೌಲಗಿರಿ ಪರ್ವತದತ್ತ ಹಾರಿದ ಬಳಿಕ ಕಣ್ಮರೆಯಾಗಿದೆ. ಅದೇ ಸಂದರ್ಭದಲ್ಲಿ ಸಂಪರ್ಕ ಕಡಿತಗೊಂಡಿದೆ ಎಂದು ಜಿಲ್ಲಾಧಿಕಾರಿ ನೇತ್ರಾ ಪ್ರಸಾದ್​​ ತಿಳಿಸಿದ್ದರು.

ವಿಮಾನದಲ್ಲಿದ್ದ ಬಹುತೇಕ ಎಲ್ಲರೂ ಬದುಕುಳಿದಿರುವ ಸಾಧ್ಯತೆ ತೀರ ಕಡಿಮೆ ಎನ್ನಲಾಗಿದ್ದು, ಪರ್ವತ ಪ್ರದೇಶವಾಗಿರುವುದರಿಂದ ವಿಮಾನ ಪತನಗೊಂಡ ಸ್ಥಳ ಸ್ಥಳದಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಸೇನೆ ಸ್ಥಳಕ್ಕೆ ಕ್ಕೆ ಹೋಗಲು ಕಷ್ಟಕರವಾಗುತ್ತಿದೆ.

ಮುಂಬೈ ಮೂಲದ ಅಶೋಕ್​ ಕುಮಾರ್ ತ್ರಿಪಾಠಿ, ಧನುಶ್​​ ತ್ರಿಪಾಠಿ, ರಿತಿಕಾ ತ್ರಿಪಾಠೀ ಮತ್ತು ವೈಭವ ತ್ರಿಪಾಠಿ ಒಂದೇ ಕುಟುಂಬ ನಾಲ್ವರು ಇದ್ದರು. ಮೂವರು ಸಿಬ್ಬಂದಿ ಸೇರಿ ಜರ್ಮನ್​ನ ಇಬ್ಬರು ಮತ್ತು 13 ಮಂದಿ ನೇಪಾಳ ಮೂಲದವರಿದ್ದರು ಎಂದು ಏರ್​ಲೈನ್​ ವಕ್ತಾರ ಸುದರ್ಶನ್​ ಭರ್ತುವಾಲ ತಿಳಿಸಿದ್ದಾರೆ.

ತಾರಾ ಏರ್​ 9ಎನ್​​ಎಇಟಿ ಎರಡು ಇಂಜಿನ್​​ವುಳ್ಳ ಖಾಸಗಿ ವಿಮಾನ ಭಾನುವಾರ ಬೆಳಗ್ಗೆ ಕಣ್ಮರೆಯಾಗಿತ್ತು. ಪೋಖ್ರಾದಿಂದ ಹಾರಾಟ ನಡೆಸಿದ್ದ ವಿಮಾನ ಬೆಳಗ್ಗೆ 9.55ಕ್ಕೆ ಸಂಪರ್ಕ ಕಡಿತಗೊಂಡಿತ್ತು. ಕಠ್ಮಂಡುವಿನಿಂದ ಸುಮಾರು 200 ಕಿಮೀ ದೂರದ ಜೊಮ್ಸನ್​​ ನಗರದ ಬಳಿ ಹಾರಾಟ ನಡೆಸುವ ವೇಳೆ ವಿಮಾನ ನಾಪತ್ತೆಯಾಗಿತ್ತು.

Copyright © All rights reserved Newsnap | Newsever by AF themes.
error: Content is protected !!