ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ – ಅಪಹರಣದ ನಂತರ ಹಲ್ಲೆ

Team Newsnap
1 Min Read

ಮಾಜಿ ಸಚಿವ ವರ್ತೂರು ಪ್ರಕಾಶ್ ಹಾಗೂ ಅವರ ಕಾರು ಚಾಲಕನನ್ನು
8- 10 ಮಂದಿ ದುಷ್ಕರ್ಮಿಗಳ ಗುಂಪೊಂದು ಕಿಡ್ನ್ಯಾಪ್ ಮಾಡಿ ನಂತರ ಹಲ್ಲೆ ನಡೆಸಿದ್ದಾರೆಂದು ಬೆಳಂದೂರು ಪೋಲಿಸರಿಗೆ ದೂರು ನೀಡಿದ್ದಾರೆ.

30 ಕೋಟಿ ರು ಗಳಿಗೆ ಡಿಮ್ಯಾಂಡ್ ಇಟ್ಟು ತಮ್ಮನ್ನು ಅಪಹರಣ ಮಾಡಿದ್ದರು. ಮೂರು ದಿನಗಳ ಕಾಲ ತಮ್ಮನ್ನು ಒತ್ತೆಯಾಗಿ ಇಟ್ಟುಕೊಂಡು ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಪ್ರಕಾಶ್ ಚುನಾವಣೆಯಲ್ಲಿ ಸೋತ ನಂತರ ಹೈನುಗಾರಿಕೆ ಮಾಡಲು ಸಿದ್ದತೆ ಮಾಡಿಕೊಂಡು ಮಹಾರಾಷ್ಟ್ರ ದಿಂದ 10 ಕೋಟಿ ರು ಮೌಲ್ಯದ ಹಸುಗಳನ್ನು ಖರೀದಿ ಮಾಡಿಕೊಂಡ ಬಂದ ನಂತರ ಹಣ ಕೊಡದೇ ಸತಾಯಿಸಿದ್ದರಿಂದ ಅಲ್ಲಿಂದ ಬಂದಿದ್ದ ತಂಡ ಕಿಡ್ನ್ಯಾಪ್ ಮಾಡಿದ್ದಾರೆಂದು ಹೇಳಲಾಗಿದೆ.

ಚಾಲಕ ಹಾಗೂ ತಮ್ಮನ್ನು ಫಾರಂ ಹೌಸ್ ನಲ್ಲಿ ಕೂಡಿ ಹಾಕಲು ಯತ್ನಿಸಿದಾಗ ತಪ್ಪಿಸಿಕೊಂಡು ಬಂದಿದ್ದಾರೆ. ನಂಬರ್ ಪ್ಲೇಟ್ ತೆಗೆದ ಕಾರೊಂದು ಬೆಳ್ಳಂದೂರು ವ್ಯಾಪ್ತಿಯಲ್ಲಿ ಸಿಕ್ಕಿದೆ.

ವರ್ತೂರು ಪ್ರಕಾಶ್ ಅವರ ಅಪಹರಣದ ಇಡೀ ಪ್ರಕರಣ ಅನುಮಾನದಿಂದ ಕೂಡಿದೆ. ಅನುಮಾನ ಬರುವಂತೆ ಪ್ರಕಾಶ್ ನಡೆ ಎದ್ದು ಕಾಣುತ್ತದೆ. ಪೋಲೀಸರು ಸಮಗ್ರ ಪ್ರಕರಣವನ್ನು ತನಿಖೆ ಮಾಡಿದಾಗಲೇ ಸತ್ಯ ಬಯಲಿಗೆ ಬರಲಿದೆ.

Share This Article
Leave a comment