January 10, 2025

Newsnap Kannada

The World at your finger tips!

WhatsApp Image 2022 04 04 at 4.56.00 PM

ಮಾಜಿ ಕಾರ್ಪೊರೇಟರ್ ಐಶ್ವರ್ಯ ಪತಿ ಲೋಹಿತ್ ನಾಪತ್ತೆ – ಪ್ರಕರಣಕ್ಕೆ ಹೊಸ ತಿರುವು

Spread the love

ಬೆಂಗಳೂರಿನ ಬಿನ್ನಿಪೇಟೆ ವಾರ್ಡ್ ಮಾಜಿ ಕಾರ್ಪೊರೇಟರ್ ಐಶ್ವರ್ಯ ಪತಿ ನಾಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಜೆಡಿಎಸ್ ಕಾರ್ಪೊರೇಟರ್ ಆಗಿದ್ದ ಐಶ್ವರ್ಯ ಪತಿ ಲೋಹಿತ್ ತೆಗೆದುಕೊಂಡು ಹೋಗಿದ್ದ ಐ 10 ಕಾರು ಈಗ ನಂದಿಗುಡಿ ಬಳಿಯ ಹಳೇವೂರಿನಲ್ಲಿ ಪತ್ತೆಯಾಗಿದೆ.

ಕಾರಿ ಸಮೀಪ ರಕ್ತದ ಗುರುತುಗಳಿವೆ. ಲೋಹಿತ್ ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಮಲಾನಗರದಲ್ಲಿ ಬೈಕ್ ಶಾಪ್ ಇಟ್ಟಿದ್ದ ಲೋಹಿತ್ ಬೈಕ್ ರೇಸ್ ಗಳಲ್ಲಿ ಭಾಗವಹಿಸುತ್ತಿದ್ದರು ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಕ್ಕೂ ಹೆಚ್ಚು ಮಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!