Electricity Bill Hike: ರಾಜ್ಯದ ಜನರಿಗೆ ಬೇಸಿಗೆಯಲ್ಲೂ ಕರೆಂಟ್​​ ಶಾಕ್​​

Team Newsnap
1 Min Read
If the bill is not paid, the electricity will be cut! ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ !

ರಾಜ್ಯದಲ್ಲಿ ವಿದ್ಯುತ್ ದರ( Electricity Bill Hike) ಏರಿಕೆಯಾಗಿದೆ. ಏಪ್ರಿಲ್‌ 1 ರಿಂದಲೇ ನೂತನ ದರ ಜಾರಿಗೆ ಬಂದಿದೆ.

ಎಲ್ಲಾ ವಿದ್ಯುತ್ ನಿಗಮಗಳಲ್ಲೂ ಸರಾಸರಿ ಪ್ರತೀ ಯೂನಿಟ್​​ಗೆ 35 ಪೈಸೆಯಷ್ಟು ದರ ಹೆಚ್ಚಳವಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಅಧ್ಯಕ್ಷ ಮಂಜುನಾಥ್ ಬೆಲೆ ಏರಿಕೆ ಕುರಿತು ಮಾಹಿತಿ ನೀಡಿದ್ದಾರೆ.

2022-23ನೇ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 2159.48 ಕೋಟಿ ರೂ. ನಷ್ಟ ಆಗಿದೆ.

ಆರ್ಥಿಕ ಕೊರತೆ ನೀಗಿಸುವ ನಿಟ್ಟಿನಲ್ಲಿ ಎಸ್ಕಾಂಗಳ ಬೇಡಿಕೆ ಪರಿಗಣಿಸಿ ಬೆಲೆ ಏರಿಕೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 5 ಪೈಸೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಪೆಟ್ರೋಲ್​​-ಡೀಸೆಲ್​ ಆಯ್ತು. ಅಡುಗೆ ಎಣ್ಣೆ ಆಯ್ತು, ಗ್ಯಾಸ್​ ಆಯ್ತು, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಯ್ತು, ಈಗ ಕರೆಂಟ್​​ ಬಿಲ್​ ಸರದಿ.

ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಲೇ ತತ್ತರಿಸಿ ಹೋಗಿರೋ ಜನರಿಗೆ ಈಗ ಕರೆಂಟ್​​ ಶಾಕ್ ಕಾದಿದೆ.

Share This Article
Leave a comment