ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಕುಮಾರಸ್ವಾಮಿ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮಣೆ ಹಾಕಿ ತಪ್ಪು ಮಾಡಿದ್ದಾರೆಂದು ಅಧ್ಯಕ್ಷರ ವಿರುದ್ದವೇ ಸಿದ್ದು ಗುಟುರು ಹಾಕಿದ್ದಾರೆ.
ಮೇಯರ್ ಸ್ಥಾನ ಜೆಡಿಎಸ್‌ಗೆ ನೀಡಿ ಸಿಟ್ಟಾಗಿರುವ ಸಿದ್ದರಾಮಯ್ಯ ಈಗ ವಿಶ್ರಾಂತಿಗೆಂದು ಬೆಂಗಳೂರಿನ ಹೊರವಲಯದ ಫಾರ್ಮ್ ಹೌಸ್‌ಗೆ ತೆರಳಿದ್ದಾರೆ. ಫಾರ್ಮ್ ಹೌಸ್‌ಗೆ ತೆರಳುವ ಮುನ್ನ ಆಪ್ತರ ಜೊತೆ ಪಕ್ಷದ ನಡೆ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಸಿದ್ದರಾಮಯ್ಯ ಹೇಳಿದ್ದಾರೂ ಏನು ? :
ಮೈಸೂರು ನನ್ನ ಜಿಲ್ಲೆಯಲ್ಲಿ ಏನು ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ನಾನು ತೀರ್ಮಾನ ಮಾಡಿದ್ದೆ. ಡಿ.ಕೆ.ಶಿವಕುಮಾರ್‌ಗೆ ಕುಮಾರಸ್ವಾಮಿ, ಜೆಡಿಎಸ್ ಮೇಲೆ ಪ್ರೀತಿ ಇದ್ದರೆ ಕುಮಾರಸ್ವಾಮಿ ಬಂದು ಕಾಂಗ್ರೆಸ್ ಪಕ್ಷ ಕಟ್ಟುತ್ತಾರಾ? ಡಿಕೆ ಶಿವಕುಮಾರ್ ಕುಮಾರಸ್ವಾಮಿ ಇನ್ನೂ ಸಮ್ಮಿಶ್ರ ಸರ್ಕಾರದಲ್ಲೇ ಇದ್ದಾರಾ? ಯಾರು ಯಾರು ಮಾತನಾಡಿದ್ದಾರೆ ಏನು ಮಾಡಿಕೊಂಡಿದ್ದಾರೆ ಎಲ್ಲಾ ನನಗೆ ಗೊತ್ತಿದೆ ಎಂದು ಗುಟುರು ಹಾಕಿದ್ದಾರೆ.
ನಾನು ಬೇಡ ಅಂದಮೇಲೂ ಡಿಕೆಶಿ ಜೆಡಿಎಸ್‌ನವರ ಹತ್ತಿರ ಮಾತನಾಡುವ ಅಗತ್ಯ ಏನಿತ್ತು? ನೋಡೋಣ ಅವನು ಶುರು ಮಾಡಿದ್ದಾನೆ. ರಾಜಕಾರಣ ಹೇಗೆ ಮಾಡಬೇಕು ಅನ್ನೋದು ನನಗೂ ಗೊತ್ತಿದೆ. ಬೇರೆ ಜಿಲ್ಲೆ ಆಗಿದ್ದರೆ ಪರವಾಗಿಲ್ಲ. ಪಕ್ಷದ ಅಧ್ಯಕ್ಷರು ಏನೋ ತೀರ್ಮಾನ ಮಾಡಿದ್ದಾರೆ ಎಂದು ಸುಮ್ಮನಾಗಬಹುದಿತ್ತು. ಆದರೆ ನನ್ನ ಜಿಲ್ಲೆ ವಿಚಾರದಲ್ಲಿ ನನ್ನ ಮಾತಿಗಿಂತ ಕುಮಾರಸ್ವಾಮಿ ಮಾತೇ ಶಿವಕುಮಾರ್‌ಗೆ ಮುಖ್ಯವೇ ಎಂದು ಪ್ರಶ್ನಿಸಿದ್ದಾರೆ.
ಮೂರು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿರುವ ಸಿದ್ದು ಯಾರನ್ನು ಭೇಟಿ ಮಾಡಲು ಬಯಸಿಲ್ಲ
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ