ಹೈದ್ರಾಬಾದ್ :
ಆಂಧ್ರ ಪ್ರದೇಶದ ಮಾಜಿ ಸಿಎಂ ಹಾಗೂ ತೆಲುಗು ದೇಶಂ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರನ್ನು ಕಳೆದ ಮಧ್ಯರಾತ್ರಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರದಲ್ಲಿ ಸ್ಕಿಲ್ ಡವೆಲಪ್ಮೆಂಟ್ ಯೋಜನೆಯಲ್ಲಿ 371 ಕೋಟಿ ರು ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿದಂತೆ ಆಂಧ್ರ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಎನ್ ಚಂದ್ರಬಾಬು ನಾಯ್ಡುರನ್ನು ಬಂಧಿಸಿದ್ದಾರೆ.
ಸ್ಕಿಲ್ ಡವೆಲಪ್ಮೆಂಟ್ ಯೋಜನೆಯಲ್ಲಿ ಅಕ್ರಮದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಎ1 ಆರೋಪಿಯಾಗಿದ್ದಾರೆ 2020ರ ಪ್ರಕರಣದ ಬಗ್ಗೆ ಹೈಕೋರ್ಟ್ ಆದೇಶ ನೀಡಿದ್ದರಿಂದ ಸಿಐಡಿ ಪೊಲೀಸರು ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡುರನ್ನು ಐಪಿಸಿ ಸೆಕ್ಷನ್ 166, 167, 418, 420 ಪ್ರಕಾರ ಬಂಧಿಸಿದ್ದಾರೆ.
ಚಂಧ್ರಬಾಬು ಬಂಧನದ ಹಿನ್ನೆಲೆಯಲ್ಲಿ ಟಿಡಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ನೂರಾರು ಕಾರ್ಯಕರ್ತರು ಅವರ ನಿವಾಸದ ಬಳಿ ಸೇರಿದ್ದಾರೆ ಎನ್ನಲಾಗಿದೆ.
ಎಫ್ಐಆರ್ ಇಲ್ಲ, ಯಾವುದೇ ನೋಟಿಸ್ ಕೊಡದೇ ಹೇಗೆ ಬಂಧನ ಮಾಡುತ್ತಿದ್ದೀರಿ. ರಿಮಾಂಡ್ ರಿಪೋರ್ಟ್ ಕೂಡ ನೀಡಿಲ್ಲ. ಹೀಗಾಗಿ ಪ್ರಕರಣದ ಕುರಿತು ವಿವರಗಳನ್ನು ನೀಡಿ ಬಳಿಕ ಅರೆಸ್ಟ್ ಮಾಡಿ ಎಂದು ಎನ್.ಚಂದ್ರಬಾಬು ನಾಯ್ಡು ಅಧಿಕಾರಿಗೆ ತಿಳಿಸಿದ್ದಾರೆ. ಆದರೆ ಇದನ್ನು ಯಾವುದೇ ಗಮನಕ್ಕೆ ತೆಗೆದುಕೊಳ್ಳದೇ ಪೊಲೀಸರು ಬಂಧಿಸಿದ್ದಾರೆ.
- ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
- ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
- ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ
- ಅಕ್ರಮ ಆಸ್ತಿ ಆರೋಪ: ಇಂದು ಲೋಕಾಯುಕ್ತ ಮುಂದೆ ಹಾಜರಾಗುವಾರಾ ಸಚಿವ ಜಮೀರ್ ಅಹ್ಮದ್?
- ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಡಿ.3 ರಂದು ಶಾಲೆ, ಅಂಗನವಾಡಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ