ಬೊಮ್ಮಾಯಿ ಕ್ಯಾಬಿನೆಟ್ ರಚನೆ ಕೊನೆಗೂ ಒಂದು ಹಂತಕ್ಕೆ ಬಂದಿದೆ. ಸಧ್ಯಕ್ಕೆ ಐವರು ಶಾಸಕರಿಗೆ ಮಾತ್ರ ದೂರವಾಣಿ ಮೂಲಕ ಮಾಹಿತಿ ಹೇಳಲಾಗಿದೆ. ಆ ಶಾಸಕರಿಗೆ ಮಂತ್ರಿ ಭಾಗ್ಯ ಸಿಕ್ಕಿದೆ. ಉಳಿದ 20 ಮಂದಿ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಗೌಪ್ಯವಾಗಿದೆ.
ಶಾಸಕ ಶಂಕರ್ ಪಾಟೀಲ್ ಮುನೇಕೊಪ್ಪ, ಈಶ್ವರಪ್ಪ, ಡಾ ಸುಧಾಕರ್ , ಬಿ ಸಿ ಪಾಟೀಲ್, ಮುರುಗೇಶ್ ನಿರಾಣಿ ಅವರುಗಳಿಗೆ ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಫೋನ್ ಮಾಡಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ದರಾಗಿ ಎಂದು ಹೇಳಿದ್ದಾರೆ.
ಸಚಿವರ ಪಟ್ಟಿಗೆ ಅಂಕಿತ ಪಡೆಯಲು ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಪ್ರದಕ್ಷಿಣೆ ಹಾಕುತ್ತಿದ್ದ ಬೊಮ್ಮಾಯಿ ಇಂದು ಬೆಳಗ್ಗೆ 9:00 ವೇಳೆಗೆ ಬೆಂಗಳೂರು ತಲುಪಲಿದ್ದಾರೆ. ಸದ್ಯ, ಮಂತ್ರಿಗಿರಿ ಪಟ್ಟಿಗೆ ಬಿಜೆಪಿ ಹೈಕಮಾಂಡ್ ನಾಯಕರ ಮುದ್ರೆ ಬಿದ್ದಿದೆ ಎನ್ನಲಾಗಿದೆ.
ಮಧ್ಯಾಹ್ನ 2:15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ,
ಬಸವರಾಜ್ ಬೊಮ್ಮಾಯಿ ಸಿಎಂ ಆದ ಕ್ಷಣದಿಂದಲೇ ನಡೆಯುತ್ತಿದ್ದ ಕ್ಯಾಬಿನೆಟ್ ರಚನೆ ಸರ್ಕಸ್ಗೆ ಕೊನೆಗೂ ಇವತ್ತು ಕ್ಲೈಮ್ಯಾಕ್ಸ್ ನಿಗದಿಯಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು