ಯಶವಂತಪುರ-ಶಿವಮೊಗ್ಗ ನಡುವೆ ಆ 10 ರಿಂದ ನಿತ್ಯವೂ ಎಕ್ಸ್‌ಪ್ರೆಸ್‌ ರೈಲು ಸಂಚಾರ

Team Newsnap
1 Min Read

ಯಶವಂತಪುರ-ಶಿವಮೊಗ್ಗ ನಡುವೆ ಆಗಸ್ಟ್​ 10ರಿಂದ ಮತ್ತೊಂದು ರೈಲನ್ನು ಓಡಿಸಲು ನಿರ್ಧರಿಸಲಾಗಿದೆ.‌

ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಆಗಸ್ಟ್​ 10 ರಿಂದ ಪ್ರತಿನಿತ್ಯವೂ ಈ ಎಕ್ಸ್​ಪ್ರೆಸ್​ ರೈಲು ಯಶವಂತಪುರ-ಶಿವಮೊಗ್ಗ ನಡುವೆ ಸಂಚಾರ ನಡೆಸಲಿದೆ.

ಈ ಕುರಿತು ರೈಲ್ವೇ ಇಲಾಖೆ ಟ್ವೀಟ್​ ಮಾಡಿದ್ದು, ರೈಲಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ರೈಲು ನಂಬರ್ 07357/07358 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಪ್ರತಿನಿತ್ಯ ಸಂಚಾರ ನಡೆಸಲಿದೆ ಆಗಸ್ಟ್ 10 ರಿಂದ ಕಾರ್ಯಾರಂಭ ಮಾಡುವ ಸದರಿ ರೈಲು ಮುಂದಿನ ಆದೇಶದ ತನಕ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ ನಿಲ್ದಾಣಗಳಲ್ಲಿ ನಿಲುಗಡೆಗೊಂಡು ಶಿವಮೊಗ್ಗ ಟೌನ್​ ತಲುಪಲಿದೆ.

ಶಿವಮೊಗ್ಗದಿಂದ ಮರಳಿ ಯಶವಂತಪುರಕ್ಕೆ ಹೋಗುವಾಗಲೂ ಅದೇ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೊಳ್ಳಲಿದೆ.

ಯಶವಂತಪುರ ರೈಲ್ವೇ ನಿಲ್ದಾಣದಿಂದ ಬೆಳಗ್ಗೆ 9.15ಕ್ಕೆ ಹೊರಡುವ ರೈಲು, ಮಧ್ಯಾಹ್ನ 2.30 ಕ್ಕೆ ಶಿವಮೊಗ್ಗ ಟೌನ್​ ನಿಲ್ದಾಣವನ್ನು ತಲುಪಲಿದೆ. ಪುನಃ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ 9.00ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ಹುಬ್ಬಳ್ಳಿ – ಬಳ್ಳಾರಿ ಗೆ ಹೆಚ್ಚುವರಿ‌ ಬೋಗಿ :

ಹುಬ್ಬಳ್ಳಿ-ಬಳ್ಳಾರಿ-ಹುಬ್ಬಳ್ಳಿ ರೈಲು ಸಂಖ್ಯೆ 07337/ 07338 ರೈಲಿಗೆ ಇಂದಿನಿಂದ (ಆಗಸ್ಟ್ 4) ಜಾರಿಗೆ ಬರುವಂತೆ 5 ಹೆಚ್ಚುವರಿ ಬೋಗಿಗಳನ್ನು ಜೋಡಿಸುತ್ತಿದೆ. ಪ್ರಸ್ತುತ ಸಂಚಾರ ನಡೆಸುತ್ತಿರುವ ರೈಲು 8 ಬೋಗಿಗಳನ್ನು ಹೊಂದಿದ್ದು, 5 ಹೆಚ್ಚುವರಿ ಬೋಗಿಗಳನ್ನು ಅಳವಡಿಕೆ ಮಾಡಿದ ನಂತರ 13 ಬೋಗಿಗಳು ಆಗಲಿವೆ. 5 ಹೆಚ್ಚುವರಿ ದ್ವಿತೀಯ ದರ್ಜೆಯ ಬೋಗಿಗಳನ್ನು ಶಾಶ್ವತವಾಗಿ ಅಳವಡಿಸಲಾಗುತ್ತಿದ್ದು, ಇದರಿಂದಾಗಿ ರೈಲಿನಲ್ಲಿ 11 ದ್ವಿತೀಯ ದರ್ಜೆ ಮತ್ತು 2 ಲಗೇಜ್-ಬ್ರೇಕ್ ವ್ಯಾನ್ ಅಥವಾ ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ ಬೋಗಿಗಳು ಇರಲಿವೆ.

TAGGED:
Share This Article
Leave a comment