ಗಾಳಿಯಲ್ಲಿ ಗುಂಡು ಹಾರಿಸಿದ ಅರಣ್ಯಾಧಿಕಾರಿಗಳು :ಮಚ್ಚಿನಿಂದ ಹಲ್ಲೆ ಮಾಡಿದ ಗಂಧಚೋರರು

Team Newsnap
1 Min Read

ಗಂಧದ ಮರ ಕಡಿಯುತ್ತಿದ್ದವರನ್ನು ಹಿಡಿಯಲು ಅರಣ್ಯಾಧಿಕಾರಿಗಳು ಗಾಳಿಯಲ್ಲಿ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಗಂಧಚೋರರು ಅರಣ್ಯ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರದ ಎಚ್.ಎನ್ ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.

ನಾಗಮಂಗಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬುಧವಾರ ಹಾಸನ ಮೂಲದ ಗೋವಿಂದಪ್ಪ ಹಾಗೂ ಆತನ ಮಕ್ಕಳಾದ ಶಂಕರ್ ಮತ್ತು ಕುಮಾರ್ ಗಂಧದ ಮರ ಕಡಿಯಲು ಬಂದಿದ್ದಾರೆ.ಮರಾಠಿಗರಿಂದ ಮತ್ತೆ ಪುಂಡಾಟ : ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿ ಮೇಲೆ ಹಲ್ಲೆ

ಈ ವೇಳೆ ಅರಣ್ಯಾಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಮರಗಳ್ಳರನ್ನು ಬಂಧಿಸಲು ಮುಂದಾಗಿದ್ದಾರೆ. ಆಗ ಅರಣ್ಯ ಇಲಾಖೆ ಸಿಬ್ಬಂದಿ ಸಾಕಯ್ಯ ಅವರ ಮೇಲೆ ಮರಗಳ್ಳರು ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

ಬಳಿಕ ಅಧಿಕಾರಿಗಳು ಮತ್ತೊಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಗೋವಿಂದಪ್ಪನಿಗೆ ಗುಂಡಿನ ಚೂರುಗಳು ತಗುಲಿ ಗಾಯಗಳಾಗಿವೆ. ಮತ್ತಿಬ್ಬರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗಾಯಾಳುಗಳಾದ ಅರಣ್ಯ ಸಿಬ್ಬಂದಿ ಸಾಕಯ್ಯ ಹಾಗೂ ಗುಂಡಿನ ಚೂರುಗಳಿಂದ ಗಾಯಗೊಂಡ ಆರೋಪಿ ಗೋವಿಂದಪ್ಪನಿಗೆ ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article
Leave a comment