ಊಟ ಮಾಡಿದ ಬಿಲ್ ಪಾವತಿಸಿ ಎಂದಿದ್ದಕ್ಕೆ ಪುಂಡರ ಗುಂಪೊಂದು ಡಾಬಾಗೆ ಬಂದು ಸಪ್ಲೈಯರ್ ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯ ಬ್ಯಾಲಕೆರೆ ಬಳಿಯಿರುವ ಯೂಟರ್ನ್ ಡಾಬಾದಲ್ಲಿ ಜರುಗಿದೆ.
ಈ ಡಾಬಾಗೆ ಊಟಕ್ಕೆ ಬಂದಿದ್ದ ಪುಂಡರು ಊಟ ಮುಗಿಸಿ ಹೊರಟಿದ್ದಾರೆ. ಈ ವೇಳೆ ಆಗಮಿಸಿದ ಸಪ್ಲೈಯರ್ ಹಾಸನ ಮೂಲದ 19 ವಷ೯ದ ಯುವಕ ಊಟ ಮಾಡಿದ ಬಿಲ್ ಪಾವತಿಸಲು ಕೇಳಿದ್ದಾನೆ.
ಕುಪಿತಗೊಂಡ ದುಷ್ಟರ ತಂಡ ಸಪ್ಲೈಯರ್ಗೆ ಅವಾಜ್ ಹಾಕಿ ಅಲ್ಲಿಂದ ತೆರಳಿದ್ದಾರೆ. ಆ ಬಳಿಕ ಮಧ್ಯರಾತ್ರಿ 12:30 ಕ್ಕೆ ಡಾಬಾ ಬಳಿ ವಾಪಸ್ ಬಂದಿದ್ದ ಆರೋಪಿಗಳು ಪೆಟ್ರೋಲ್ ತಂದು ಡಾಬಾ ಬಾಗಿಲಿಗೆ ಚಿಲಕ ಹಾಕಿ ಬೆಂಕಿ ಹಚ್ಚಿದ್ದಾರೆ.
ಈ ವೇಳೆ ಒಳಗಡೆ ಊಟ ಮಾಡುತ್ತಿದ್ದ ಡಾಬಾ ಸಿಬ್ಬಂದಿ ಮನೋಜ್ ಬೆಂಕಿಯನ್ನು ಕಂಡು ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ಬಾಗಿಲ ಬಳಿಗೆ ಓಡಿ ಬಂದಿದ್ದಾರೆ.
ಈ ವೇಳೆ ಆರೋಪಿಗಳು ಎರಚುತ್ತಿದ್ದ ಪೆಟ್ರೋಲ್ ಮನೋಜ್ ಮೇಲೆ ಬಿದ್ದು ಆತನಿಗೂ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಉಳಿದ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಗಂಭೀರವಾಗಿ ಗಾಯಗೊಂಡಿರುವ ಮನೋಜ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಬುದ್ಧಿಮಾಂದ್ಯ ಬಾಲಕಿಗೆ ಪಕ್ಕದ ಮನೆಯವನಿಂದಲೇ ಅತ್ಯಾಚಾರ – ಆರೋಪಿ ಪರಾರಿ
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್