December 23, 2024

Newsnap Kannada

The World at your finger tips!

krs water

ಕಾವೇರಿ ನೀರು ಹರಿಸಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ – ಸಿ.ಎಸ್.ಪುಟ್ಟರಾಜು

Spread the love

ಮಂಡ್ಯ: – ಕಾವೇರಿ ಜಲಾಶಯಗಳಿಂದ ನಿರಂತರ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಾತ್ಯಾತೀತ ಜನತಾದಳ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

kaveri dam krs dam karnataka

KRS ಜಲಾಶಯದಿಂದ ಹರಿದು ಹೋಗುತ್ತಿರುವ ನೀರು ತಕ್ಷಣ ನಿಲುಗದ್ದೆಯಾಗಬೇಕು. ಕನ್ನಂಬಾಡಿ ಅಣೆಕಟ್ಟೆ ಬಾಗಿಲು ಮುಚ್ಚಿಸಲು ಕ್ಷೇತ್ರವಾರು ಹೋರಾಟ ಅನಿವಾರ್ಯ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಎಚ್ಚರಿಸಿದರು. ಕಾವೇರಿ ಉಳಿಸಿ ರೈತರನ್ನು ರಕ್ಷಿಸಿ – ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ

ಮಂಡ್ಯದಲ್ಲಿ JDS ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜುವರು, ಏಕಪಕ್ಷೀಯ ತೀರ್ಮಾನದಿಂದ ನೀರು ಹರಿಸಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡುತ್ತಿರುವ ರಾಜ್ಯ ಸರ್ಕಾರ ಕಣ್ಣು ತೆರೆಸಲು ಪ್ರತಿಭಟನೆ ಅನಿವಾರ್ಯವಾಗಿದ್ದು, ಸರ್ಕಾರ ರಾಜ್ಯದ ನೆಲ, ಜಲದ ಬಗ್ಗೆ ಆಸಕ್ತಿ ತೋರಿದ್ದಾರೆ. ಇಂತಹ ದುಃಸ್ಥಿತಿ ಬರುತ್ತಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಹೆಚ್.ಡಿ.ದೇವೇಗೌಡರ ಕೌಶಲ್ಯದಿಂದ ರಾಜ್ಯಕ್ಕ 14.71 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದ ಪರಿಣಾಮ ಕಾವೇರ ಜಲಾನಯನ ಪ್ರದೇಶದ ಅಣೆಕಟ್ಟೆಗಳು ಬರಿದಾಗುತ್ತಿವೆ, ನೆರೆಯ ತಮಿಳನಾಡು ರಾಜ್ಯದಂತೆ ತುರ್ತು ಗಮನ ಹರಿಸುವ ಚಿಂತನೆ ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದರು.

ನಾನು ಜೆಡಿಎಸ್‌ ಪಕ್ಷದಲ್ಲೇ ಇರುತ್ತೇನೆ: ಸಿ.ಎಸ್‌.ಪುಟ್ಟರಾಜು

kaveri water issue mandya news

ನಾನು ಜೆಡಿಎಸ್‌ ಪಕ್ಷದಲ್ಲೇ ಇರುತ್ತೇನೆ, ಊಹಾಪೋಹಗಳಿಗೆ ಕಿವಿಗೊಡದಂತೆ ನಮ್ಮ ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಸದ್ಯಕ್ಕೆ ಜಿಲ್ಲೆಯಾದ್ಯಂತ ಕಾವೇರಿ ನೀರಿಗಾಗಿ ರೈತಪರವಾಗಿ ಹೋರಾಡುತ್ತೇವೆ ಎಂದು ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಶುಕ್ರವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಮ್ಮ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ, ಅವರನ್ನು ಮನೆಗೆ ಕರೆದುಕೊಂಡು ಬರಲು ಹೋಗುತ್ತಿದ್ದೇವೆ. ನಾನು ಜೆಡಿಎಸ್‌ನಲ್ಲಿ ಸಕ್ರಿಯವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಕೃಪೇಂದ್ರರೆಡ್ಡಿ ಹಾಗೂ ನಾನು ಕೊಡಗಿನಲ್ಲಿ ಜೊತೆಯಲ್ಲಿದ್ದು ಪೂಜೆ ಸಲ್ಲಿಸಲು ತೆರಳಿದ್ದೆವು. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದರು.

ಭವಿಷ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ – ರವೀಂದ್ರ ಶ್ರೀಕಂಠಯ್ಯ

ಕಾವೇರಿ ನದಿ ಪಾತ್ರದ ಅಣೆಕಟ್ಟೆಗಳ ವಾಸ್ತವತೆಯನ್ನು ಮನವರಿಕೆ ಮಾಡದೇ ನಿತ್ಯ ಏಳು ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಯಿಂದ ಭವಿಷ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗಲಿದ್ದು, ಇದನ್ನು ಮನಗೊಂಡು, ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಿ ರೈತರ ಹೋರಾಟಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಆಗಮಿಸಬೇಕೆಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕರೆ ನೀಡಿದರು.

ಅಣೆಕಟ್ಟೆಯಿಂದ ನೀರು ಹೋದ ನಂತರ ಪರಿಸ್ಥಿತಿ ಏನಾಗಲಿದೆ ಎಂಬುವುದನ್ನು ಜಿಲ್ಲೆಯ ಉಸ್ತುವಾರಿ ಸಚಿವ, ಸಂಸದೆ ಹಾಗೂ ಶಾಸಕರು ಅರಿತುಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಸೌಖ್ಯಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮೇಲಿನ ಮಮತೆಗಾಗಿ ರೈತರ ಹಿತ ಬಲಿಕೊಟ್ಟು ನೀರು ಬಿಡಬೇಡಿ, ಕೂಡಲೇ ನೀರು ನಿಲ್ಲಿಸದಿದ್ದರೆ ಹೋರಾಟ ಉಗ್ರ ರೂಪಕ್ಕೆ ತೆರಳಲಿದೆ ಎಂಬುದನ್ನು ಮನಗಾಣಬೇಕೆಂದರು.

ಕಾವೇರಿ ನೀರು ಹರಿಸಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ – ಸಿ.ಎಸ್.ಪುಟ್ಟರಾಜು – flow of kaveri is leading drainig of farmer #mandya #krs #karnataka

Copyright © All rights reserved Newsnap | Newsever by AF themes.
error: Content is protected !!