ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ – ಫೆ.10ರಿಂದ ಮತದಾನ: ಮಾ.10ಕ್ಕೆ ಮತ ಎಣಿಕೆ

Team Newsnap
1 Min Read

ದೇಶದ ಪಂಚರಾಜ್ಯಗಳ ಚುನಾವಣೆ ವೇದಿಕೆ ಸಿದ್ದವಾಗಿದೆ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆ ದಿನಾಂಕ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

ಕೇಂದ್ರ ಚುನಾವಣಾ ಆಯೋಗ ಶನಿವಾರ ಸುದ್ದಿಗೋಷ್ಠಿಯಲ್ಲಿ ಚುನಾವಣೆಯನ್ನು ಕುರಿತಂತ ಮಾಹಿತಿ ನೀಡಿ ಪಂಚ ರಾಜ್ಯಗಳಿಗೆ 7 ಹಂತಗಳಲ್ಲಿ ಮತದಾನ ನಡೆಸುವುದಾಗಿ ಪ್ರಕಟಿಸಿತು

ಫೆಬ್ರವರಿ 10 ರಿಂದ ಮಾರ್ಚ್‌ 7ರ ವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್‌ 10ರಂದು ಫಲಿತಾಂಶ ಹೊರ ಬೀಳಲಿದೆ.

election press meet

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನ ?

ಉತ್ತರ ಪ್ರದೇಶ‌

ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. (ಫೆ.10ರಿಂದ ಮಾರ್ಚ್‌ 7)

ಪಂಜಾಬ್‌

ರಾಜ್ಯದ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. (ಫೆ.14)

ಗೋವಾ

ರಾಜ್ಯದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. (ಫೆ.14)

ಮಣಿಪುರ
ರಾಜ್ಯದ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. (ಫೆ.27 ಮತ್ತು ಮಾ.3)

ಉತ್ತರಾಖಂಡ

ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. (ಫೆ.14)

7 ಹಂತಗಳ ಮತದಾನದ ವಿವರ :

ಮೊದಲ ಹಂತ – ಫೆ.10
ಎರಡನೇ ಹಂತ – ಫೆ.14
ಮೂರನೇ ಹಂತ – ಫೆ.20
ನಾಲ್ಕನೇ ಹಂತ – ಫೆ.23
ಐದನೇ ಹಂತ – ಫೆ.27
ಆರನೇ ಹಂತ – ಮಾ.3
ಏಳನೇ ಹಂತ – ಮಾ.7

ದೇಶದಲ್ಲಿ ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊಸ ಕೋವಿಡ್‌ ನಿಯಮಾವಳಿಗಳು ಅನ್ವಯವಾಗಲಿವೆ.

ಚುನಾವಣೆಯ ಬಹಿರಂಗ ಪ್ರಚಾರಗಳಿಗೆ ಬ್ರೇಕ್‌

ಈ ಬಾರಿಯ ಚುನಾವಣಾ ಪ್ರಚಾರ ಡಿಜಿಟಲ್‌ ವೇದಿಕೆಗಳ ಮೂಲಕ ರಂಗೇರಲಿದೆ.

ಬಹಿರಂಗ ರ‍್ಯಾಲಿ, ಸಭೆ-ಸಮಾರಂಭಗಳನ್ನು ನಡೆಸುವುದಿಲ್ಲ ಎಂದು ಈಗಾಗಲೇ ರಾಜಕೀಯ ಪಕ್ಷಗಳು ನಿರ್ಧರಿಸಿವೆ.

Share This Article
Leave a comment