ಮೊದಲ ಬಾರಿಗೆ ಶಾಸಕರಾದವರಿಗೆ ನಿಗಮ – ಮಂಡಳಿಯಲ್ಲಿ ಸ್ಥಾನವಿಲ್ಲ-ಡಿಕೆಶಿ

Team Newsnap
1 Min Read

ಬೆಂಗಳೂರು : ನಿಗಮಮಂಡಳಿ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ನಾನು, ಸಿಎಂ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ.

ಅಂತಿಮ ನಿರ್ಧಾರವನ್ನು ದೆಹಲಿ ವರಿಷ್ಠರು ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು .

ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ಪಟ್ಟಿಯನ್ನು ಸುರ್ಜೆವಾಲಾ ತೆಗೆದುಕೊಂಡು ದೆಹಲಿಗೆ ಹೋಗಿದ್ದು, ಕುಳಿತು ಮಾತನಾಡಿ ಚರ್ಚೆ ಮಾಡಿ ದೆಹಲಿಯಿಂದ ಪಟ್ಟಿ ಕಳುಹಿಸಿಕೊಡುತ್ತಾರೆ ಎಂದರು.

ಮೊದಲ ಬಾರಿ ಶಾಸಕರಾದವರಿಗೆ ಸ್ಥಾನವಿಲ್ಲ:

ಅಂತಿಮವಾಗಿ ಹೈಕಮಾಂಡ್ ಗೆ ಪಟ್ಟಿ ರವಾನೆ ಮಾಡಲಾಗಿದೆ, ಹೈಕಮಾಂಡ್ ಸದ್ಯದಲ್ಲಿಯೇ ಹೆಸರು ಅಂತಿಮ ಮಾಡಬಹುದು ಎಂದರು.

ನಿಗಮ ಮಂಡಳಿ ಪಟ್ಟಿಯನ್ನು ಹೈಕಮಾಂಡ್ ಗೆ ರವಾನೆ ಮಾಡಲಾಗಿದ್ದು, ಆದಷ್ಟು ಬೇಗ ಪಟ್ಟಿ ಬಿಡುಗಡೆ ಮಾಡುತ್ತೇವೆ. ಮೊದಲ ಬಾರಿ ಶಾಶಕರಾದವರಿಗೆ ನಿಗಮದಲ್ಲಿ ಸ್ಥಾನವಿಲ್ಲ. 2ನೇ ಹಂತದಲ್ಲಿ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನ ನೀಡುತ್ತೇವೆ ಎಂದರು.ತೆಲಂಗಾಣದಲ್ಲಿ 737 ಕೋಟಿ ರೂ. ನಗದು ಮತ್ತು ಚಿನ್ನಾಭರಣ ಚುನಾವಣಾಧಿಕಾರಿಗಳಿಂದ ಜಪ್ತಿ

ಸಿಎಂಗೆ ಬಿಆರ್ ಪಾಟೀಲ್ ಪತ್ರ ಬರೆದಿರುವ ವಿಚಾರ ಗೊತ್ತಿಲ್ಲ ಈ ವಿಚಾರವನ್ನು ಸಂಬಂಧ ಪಟ್ಟ ಸಚಿವರ ಜೊತೆ ಮಾತನಾಡುತ್ತೇವೆ. ನನಗೆ ಗೊತ್ತಿಲ್ಲ, ಈಗ ನೀವು ತಿಳಿಸ್ತಾ ಇದ್ದೀರಿ. ಏನು ವಿಚಾರ ಅನ್ನೋದು ಗೊತ್ತಿಲ್ಲ ಹಿಂದೆ ಕೆಲ ಸಚಿವರು ಹೇಳಿರುವ ವಿಚಾರಗಳನ್ನೂ ಚರ್ಚಿಸುತ್ತೇವೆ ಬಿ.ಆರ್ ಪಾಟೀಲ್ ಅವರನ್ನೂ ಕರೆದು ಚರ್ಚೆ ಮಾಡುತ್ತೇನೆ ಎಂದರು .

Share This Article
Leave a comment