ರಾಜ್ಯ ಒಕ್ಕಲಿಗರ ಸಂಘದ ಮಾಜಿ‌ ಅಧ್ಯಕ್ಷ ಅಪ್ಪಾಜಿಗೌಡ ವಿರುದ್ದ ಎಫ್ ಐ ಆರ್ ದಾಖಲು

Team Newsnap
1 Min Read

ಹಣ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ವಿರುದ್ಧ ಬೆಂಗಳೂರಿನ ವಿವಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.ಮಾಜಿ ಅಧ್ಯಕ್ಷ ಕಾಳೇ ಗೌಡ, ಮಾಜಿ‌ ನಿರ್ದೇಶಕ ನರೇಂದ್ರ ಬಾಬು ಸೇರಿ ಇತರರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ :

2016 -17ರ ಶೈಕ್ಷಣಿಕ ಸಾಲಿನ ಮೆಡಿಕಲ್ ವಿದ್ಯಾರ್ಥಿ ಶುಲ್ಕ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಇಓ ಡಾ. ಸಿದ್ಧರಾಮಯ್ಯ ದೂರು ನೀಡಿದ್ದರು.

ಈ ದೂರು ಹಿನ್ನೆಲೆಯಲ್ಲಿ ಮೂವರ ವಿರುದ್ದ ಐಪಿಸಿ ಸೆಕ್ಷನ್ 420, 120b, 406, 417 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಅಪ್ಪಾಜಿ ಗೌಡ ಮತ್ತು ಇತರರ ವಿರುದ್ಧ ಒಟ್ಟು 70 ಲಕ್ಷ ಹಣ ಪಡೆದು ಸಂಸ್ಥೆಗೆ ನೀಡದೇ ವಂಚಿಸಿರುವ ಆರೋಪ ಇದೆ.

ಕಿಮ್ಸ್ ನಲ್ಲಿ ಮೆಡಿಕಲ್ ಸೈನ್ಸ್ ಡಿಪ್ಲೋಮಾಗೆ ವಿದ್ಯಾರ್ಥಿನಿ ಮರಿ ಅನುಷಾ ದೀಪ್ತಿ ಸೇರಿದ್ದರು. ಅದರಂತೆ ಅವರ ತಂದೆ ವೀರಕೃಷ್ಣ ಶುಲ್ಕವನ್ನು ಅರ್ಧ ಮಾತ್ರ ಕಟ್ಟಿದ್ದರು. ಉಳಿದ ಹಣವನ್ನು ಕಟ್ಟುವಂತೆ 2018 ಅಕ್ಟೋಬರ್ 26ಕ್ಕೆ ಇವರು ನೋಟಿಸ್ ನೀಡಿದ್ದರು ಎನ್ನಲಾಗಿದೆ.

ಪೋಷಕರು ಪಾವತಿಸಿದ ಹಣವನ್ನು ಅಧ್ಯಕ್ಷ ಅಪ್ಪಾಜಿ ಗೌಡರು ಮತ್ತಿಬ್ಬರಿಗೆ ಹಂಚಿದ್ದರು ಹಾಗೂ ಪೋಷಕರು ನೀಡಿರುವ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಕಿಮ್ಸ್ ಕಡೆಯಿಂದ ಮೂವರ ವಿರುದ್ಧ ದೂರು ದಾಖಲಾಗಿದೆ.

Share This Article
Leave a comment