December 28, 2024

Newsnap Kannada

The World at your finger tips!

bus fire

ಚಲಿಸುತ್ತಿದ್ದ ಬಸ್ ಗೆ ಮತ್ತೆ ಬೆಂಕಿ : ಜಯನಗರದಲ್ಲಿ ದುರಂತ ಘಟನೆ – ಯಾವುದೇ ಪ್ರಣಾಪಾಯವಿಲ್ಲ

Spread the love

ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬಸ್ ಸುಟ್ಟು ಕರಕಲಾಗಿದೆ, ಯಾವುದೇ ಅನಾಹತ ಸಂಭವಿಸಿಲ್ಲ. ಈ ಘಟನೆ ಬೆಂಗಳೂರಿನ ಜಯನಗರದ ಮೆಟ್ರೋ ಸ್ಟೇಷನ್ ಹಿಂಭಾಗ ನಡೆದಿದೆ.

ಮೆಜೆಸ್ಟಿಕ್​ನಿಂದ ಜಯನಗರ ಕಡೆ ಸುಮಾರು 30 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಬಸ್​ನಲ್ಲಿ ಇದ್ದಕ್ಕಿದ್ದಂತೆ ಸೌಂಡ್​ ಕೇಳಿ ಅನುಮಾನ ವ್ಯಕ್ತಪಡಿಸಿದ ಡ್ರೈವರ್​ ಕೆಂಪರಾಜು ಬಸ್​ ನಿಲ್ಲಿಸಿ ನೋಡುತ್ತಿದ್ದಂತೆ ಬಸ್​ನಲ್ಲಿ ಹೊಗೆಯಾಡಲು ಆರಂಭವಾಗಿತ್ತಂತೆ.

ತಕ್ಷಣವೇ ಕಂಡಕ್ಟರ್​ಗೆ ತಿಳಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರೆಲ್ಲರು ಕೆಳಗಿಳಿಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಬಸ್​ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿ ಬೆಂಕಿ ಆರಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!