December 26, 2024

Newsnap Kannada

The World at your finger tips!

lift

ಐಎಎಸ್ – ಐಪಿಎಸ್ ಅಧಿಕಾರಿಗಳ ವಾಸದ ಬಹು ಮಹಡಿ ಕಟ್ಟಡದ ಲಿಪ್ಟ್ ನಲ್ಲಿ ಬೆಂಕಿ

Spread the love

ಬೆಂಗಳೂರಿನ ವಸಂತನಗರದಲ್ಲಿರುವ ಐಎಎಸ್ – ಐಪಿಎಸ್ ಅಧಿಕಾರಿಗಳ ವಾಸದ ಬಹು ಮಹಡಿ ಕಟ್ಟಡದ ಲಿಪ್ಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಆದರೆ ಈ ಬೆಂಕಿ ಅನಾಹುತದಿಂದ ಯಾವುದೇ ಅವಘಡಗಳೂ ಸಂಭವಿಸಿಲ್ಲ.

ಐಎಎಸ್ ರಾಜೇಂದ್ರ ಕಟಾರಿಯಾ ಹಾಗೂ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣನ್ನವರ್ ಸೇರಿದಂತೆ ಹಿರಿಯ ಅಧಿಕಾರಿಗಳು ವಾಸ ಇರುವ ನಿವಾಸದ
ಒಂದನೇ ಪ್ಲೋರ್ ನಿಂದ ನಾಲ್ಕನೇ ಪ್ಲೋರ್ ವರೆಗೂ ಬೆಂಕಿ ಕಾಣಿಸಿಕೊಂಡಿದೆ.

ಲಿಪ್ಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿದೆ.
ಎರಡು ಅಗ್ನಿ ಶಾಮಕ‌ ದಳ ವಾಹನವು ಬೆಂಕಿ ನಂದಿಸುವ ಕಾರ್ಯ ಮಾಡಿವೆ.

ಹೈ ಗ್ರೌಂಡ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಹೈ ಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಯಾವುದೇ ಸಾವು ನೋವು ಸಂಭವಿಸಿಲ್ಲ .

Copyright © All rights reserved Newsnap | Newsever by AF themes.
error: Content is protected !!