December 29, 2024

Newsnap Kannada

The World at your finger tips!

benki

ಬೆಂಗಳೂರಲ್ಲಿ ಮತ್ತೆ ಅಗ್ನಿ ದುರಂತ- ಸಿಲಿಂಡರ್ ಸ್ಫೋಟಗೊಂಡು ಭಾರೀ ಅನಾಹುತ

Spread the love

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ನಡೆದಿದೆ, ಶಾರ್ಟ್ ಸರ್ಕ್ಯೂಟ್​​ನಿಂದ ಕಳೆದ ರಾತ್ರಿ 2.30 ರ ವೇಳೆಗೆ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ನಡೆದಿದೆ.

ಬೆಂಗಳೂರಿನ ವಿವೇಕನಗರದ ಹೊನ್ನಾರ್ ಪೇಟ್​ನಲ್ಲಿರುವ ಗ್ಯಾರೇಜ್​ನಲ್ಲಿ ಈ ಅವಘಡ ನಡೆದಿದೆ.

ಬೆಂಕಿಯ ಕೆನ್ನಾಲಿಗೆಗೆ ಕಾರು ಗ್ಯಾರೇಜ್ ಸಂಪೂರ್ಣ ಭಸ್ಮವಾಗಿದೆ. ಗ್ಯಾರೇಜ್​ನಲ್ಲಿರುವ 3 ಬೈಕ್, 4 ಕಾರು ಬೆಂಕಿಗಾಹುತಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನಾಸೀರ್ ಎಂಬುವವರ ಮಾಲೀಕತ್ವದ ಗ್ಯಾರೇಜ್ ಇದಾಗಿತ್ತು. ಬೆಂಕಿ ಹೊತ್ತಿಕೊಂಡ ಪರಿಣಾಮ ಗ್ಯಾರೇಜ್​​ನಲ್ಲಿದ್ದ 2 ಸಿಲಿಂಡರ್ ಕೂಡ ಸ್ಫೋಟಗೊಂಡಿದೆ.

ಸ್ಫೋಟದ ಭೀಕರತೆಗೆ ನಗರದ ಜನ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿನಂದಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!