ತುಮಕೂರಿನ ಜಿಲ್ಲಾ ನ್ಯಾಯಾಲಯ ಬಾಲಿವುಡ್ ನಟಿ ಕಂಗನಾ ರನಾವತ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕ್ಯಾತಸಂದ್ರ ಪೋಲೀಸ್ ಠಾಣೆಗೆ ನಿರ್ದೇಶನ ನೀಡಿದೆ.
ಪ್ರಸ್ತುತದ ಕೇಂದ್ರ ಸರ್ಕಾರ ಪ್ರಚುರ ಪಡಿಸಿದ ಕೃಷಿ ಮಸೂದೆಗಳ ಬಗ್ಗೆ ಇಡೀ ದೇಶದ ರೈತರು ವಿರೋಧಿ ಭಾವನೆ ತಳೆದಿದ್ದರು. ಮಸೂದೆಗಳ ಮಂಡನೆಯ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು. ರೈತ ಪ್ರತಿಭಟನೆಯ ಸಂದರ್ಭದಲ್ಲಿ ಕಂಗನಾ ‘ರೈತರು ಭಯೋತ್ಪಾದಕರು’ ಎಂಬ ಅರ್ಥ ಬರುವಂತೆ ಟ್ವೀಟ್ ಮಾಡಿದ್ದರು. ಕಂಗನಾ ಅವರ ಈ ಹೇಳಿಕೆ ರೈತರ ಹಾಗೂ ನಾಗರೀಕರ ಕಣ್ಣನ್ನು ಕೆಂಪಗಾಗಿಸಿತ್ತು.
ಕಂಗನಾ ಹೇಳಿಕೆ ವಿರುದ್ಧ ರಮೇಶ್ ನಾಯಕ್ ಎಂಬುವವರು ತುಮಕೂರಿನ ಜಿಲ್ಲಾ ನ್ಯಾಯಾಲಯದಲ್ಲಿ ‘ಕಂಗನಾ ಹೇಳಿಕೆಯಲ್ಲಿ ಜನರ ಮನಸ್ಸನ್ನು ನೋಯಿಸುವ ಸ್ಪಷ್ಟ ಉದ್ದೇಶವಿದೆ. ಹಾಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದರು.
ರಮೇಶ್ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇಂದು ಕ್ಯಾತಸಂದ್ರದ ಪೋಲೀಸ್ ಠಾಣೆಗೆ ಕಂಗನಾ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 156(3) ರ ಪ್ರಕಾರ ಎಫ್‌ಐಆರ್ ದಾಖಲಿಸುವಂತೆ ಆದೇಶ ನೀಡಿದೆ.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು