ಮೃತ ವೃದ್ಧೆಯ ಹೆಬ್ಬೆಟ್ಟನ್ನು ಖಾಲಿಜಾಗಕ್ಕೆ ಒತ್ತಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಆ ವೇಳೆ ಮೃತ ವೃದ್ಧೆಯ ಹೆಬ್ಬೆಟ್ಟಿನ ಗುರುತು ಪಡೆಯುವುದನ್ನು ಕಾವ್ಯ ತಮ್ಮ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿದ ಕಾವ್ಯ ಮತ್ತು ಸುರೇಶ್ ವಿರುದ್ಧ ಠಾಣೆ ಮೊ.ಸಂ 91/2021 ಕಲಂ 420, 467, 511 IPC ರೀತ್ಯಾ ಪ್ರಕರಣ ದಾಖಲು ಮಾಡಿದ್ದಾರೆ. ಹೆಬ್ಬೆಟ್ಟನ್ನು ಪಡೆಯುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಿರುವ ಕಾವ್ಯ ಪ್ರಕರಣ ದಾಖಲಿಸಿದ್ದಾರೆ.
ಶ್ರೀರಾಂಪುರ ನಿವಾಸಿ ಜಯಮ್ಮನವರು ನವೆಂಬರ್ 16 ರಂದು ವಯೋಸಹಜವಾಗಿ ಮೃತಪಟ್ಟಿದ್ದರು.
ಅಂತಿಮ ದರ್ಶನ ಪಡೆಯಲು ಸಂಬಂಧಿಕರಾದ ಕಾವ್ಯ ತೆರಳಿದ್ದಾಗ ಮೃತ ಜಯಮ್ಮರವರ ಅಕ್ಕನ ಮಗ ಸುರೇಶ್ ಆಸ್ತಿಗಾಗಿ ಬಾಂಡ್ ಪೇಪರ್ ಮೇಲೆ ಮೃತ ಜಯಮ್ಮನವರ ಹೆಬ್ಬೆಟ್ಟಿನ ಗುರುತನ್ನು ಒತ್ತಿಸಿಕೊಳ್ಳುತ್ತಿದ್ದರು.
ಈ ಬಗ್ಗೆ ಪ್ರಶ್ನೆ ಮಾಡಿದಾಗ ನಿನಗೆ ಏಕೆ ಸುಮ್ಮನಿರು ಎಂದು ಸುರೇಶ್ ಆವಾಜ್ ಹಾಕಿ ಬಾಯಿ ಮುಚ್ಚಿಸಿದ್ದರು.
ಜಯಮ್ಮ ಅವರ ಹೆಸರಿನಲ್ಲಿ ಪಿತ್ರಾರ್ಜಿತವಾಗಿ 14 ಎಕರೆ ಆಸ್ತಿ ಇತ್ತು. ಮದುವೆಯಾದ ಬಳಿಕ ಪತಿಯಿಂದ ಜಯಮ್ಮ ದೂರವಾಗಿದ್ದರು. ಆಸ್ತಿ ಪಾಲು ಪಡೆಯಲು ಪತಿ, ಮಕ್ಕಳು ಯಾರೂ ಇರಲಿಲ್ಲ. ಹೀಗಾಗಿ ಜಯಮ್ಮ ಅವರ ಅಕ್ಕನ ಮಗ ಆಸ್ತಿಗಾಗಿ ಬಾಂಡ್ ಪೇಪರ್‌ಗೆ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು