ಕರ್ನಾಟಕ ಸಾರಿಗೆ ತನ್ನ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿ ಮಾಡಲು ಮುಂದಾಗಿದೆ. ಇನ್ನು ಮುಂದೆ ನಿಯಮದಂತೆ 4 ವರ್ಷದ ಮಕ್ಕಳೂ ಸೇರಿ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಇಲ್ಲದಿದ್ದರೆ ದ್ವಿಚಕ್ರ ವಾಹನ ಸವಾರರಿಗೆ ದಂಡದ ಜೊತೆಗೆ ಸವಾರರ ಚಾಲನಾ ಪರವಾನಿಗೆ(ಡಿಎಲ್)ಯನ್ನು ಮೂರು ತಿಂಗಳುಗಳ ಕಾಲ ರದ್ದು ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ನಿಯಮದ ಪ್ರಕಾರ ಎಲ್ಲರೂ ಹೆಲ್ಮೆಟ್ ಧರಿಸಬೇಕು. ಹಳೆಯ ನಿಯಮಗಳು ಮತ್ತೆ ಕಟ್ಟುನಿಟ್ಟಾಗಿ ಜಾರಿಯಾಗಲಿವೆ. ಹೆಲ್ಮೆಟ್ ಧರಿಸದಿದ್ದರೆ ಯಾವುದೇ ಅವಕಾಶವನ್ನು ನೀಡದೇ ಮೂರು ತಿಂಗಳವರೆಗೆ ಲೈಸೆನ್ಸ್ ರದ್ದು ಮಾಡುವ ನಿಯಮವನ್ನು ಜಾರಿಗೊಳಿಲಸಲಾಗುವುದು ಎಂದು ಸಾರಿಗೆ ಇಲಾಖೆ ಸ್ಪಷ್ಟವಾಗಿ ಹೇಳಿದೆ.
ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯ ಶಿಫಾರಸ್ಸಿನಂತೆ ಹಾಗೂ ಕರ್ನಾಟಕ ಮೋಟಾರುವಾಹನ ನಿಯಮದ ಅನ್ವಯ, ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುವ ಎಲ್ಲರೂ ಹೆಲ್ಮಟ್ ಧರಿಸಲೇಬೇಕು ಎಂದು ಸೂಚಿಸಿದೆ ಸಾರಿಗೆ ಇಲಾಖೆ
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ