ಪಂಚಭೂತಗಳಲ್ಲಿ ‘ಸ್ಪಂದನಾ’ ಲೀನ

Team Newsnap
1 Min Read

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಸಂಸ್ಕಾರ ಬೆಂಗಳೂರಿನ ಶ್ರೀರಾಂಪುರದ ಹರಿಶ್ಚಂದ್ರಘಾಟ್​ನಲ್ಲಿ ನೆರಮೇರಿಸಲಾಗಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಈಡಿಗ ಬಿಲ್ಲವ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರವಾಗಿದ್ದು, ಅಂತಿಮ ವಿಧಿವಿಧಾನಗಳನ್ನು ಪತಿ ವಿಜಯ್ ಹಾಗೂ ಪುತ್ರ ಶೌರ್ಯ ನೆರವೇರಿಸಿದ್ದಾರೆ. ಕುಟುಂಬಸ್ಥರು, ಸಂಬಂಧಿಕರಿಂದ ಸ್ಪಂದನಾಗೆ ಕಣ್ಣೀರಿನ ವಿದಾಯ ಹೇಳಲಾಯಿತು.

ವಿಜಯ್​ ರಾಘವೇಂದ್ರಗೆ ಶಕ್ತಿಯಾಗಿದ್ದ ಸ್ಪಂದನಾ, ರಾಘು ಗೆಲುವಿಗೆ ಬೆನ್ನೆಲುಬಾಗಿ ನಿಂತಿದ್ದ ಸ್ಪಂದನಾ, ಚಿನ್ನಾರಿ ಮುತ್ತನನ್ನು ಬಿಟ್ಟು ಬಾರಾದ ಲೋಕಕ್ಕೆ ತೆರಳಿದ್ದಾರೆ. ವಿಜಯ್​ ರಾಘವೇಂದ್ರನಿಗೆ ಶಕ್ತಿಯಾಗಿದ್ದ ಸ್ಪಂದನಾ ಕಳೆದುಕೊಂಡು ರಾಘು ಕಣ್ಣೀರಿಡುತ್ತಿದ್ದಾರೆ. ಮಕ್ಕಳಿಗೆ ತಾಯಿಯೇ ಶಕ್ತಿ, ತಾಯಿ ಕಳೆದುಕೊಂಡ ಶೌರ್ಯ ಕೂಡ ಭಾವುಕರಾಗಿ ತಂದೆ, ಚಿಕ್ಕಪ್ಪನನ್ನು ತಬ್ಬಿಕೊಂಡು ಅಳುತ್ತಿದ್ದಾರೆ.

ಮಲ್ಲೇಶ್ವರಂನ ಬಿ.ಕೆ ಶಿವರಾಮ್​ ಅವರ ಮನೆಯಿಂದ ಶ್ರೀರಾಮಂಪುರದ ಹರಿಶ್ಚಂದ್ರ ಘಾಟ್​ವರೆಗೂ ಅಂತಿಮ ಯಾತ್ರೆ ನಡೆಯಿತು. ಸಾರ್ವಜನಿಕರು ಸಾಲು ಗಟ್ಟಿ ನಿಂತು ಸ್ಪಂದನಾಗೆ ಅಂತಿಮ ನಮನ ಸಲ್ಲಿಸಿದರು. ಹರಿಶ್ಚಂದ್ರಘಾಟ್​ನಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯ್ತು.

ಅಶ್ವಿನಿ ಪುನೀತ್ ರಾಜ್‌ಕುಮಾರ್, ರಮೇಶ್ ಅರವಿಂದ್, ನಟ ಜಯರಾಮ್ ಕಾರ್ತಿಕ್, ರಾಕಿಂಗ್​ ಸ್ಟಾರ್​ ಯಶ್​, ರವಿಚಂದ್ರನ್​, ಶಿವರಾಜ್​ ಕುಮಾರ್​, ನಟ ಸೃಜನ್ ಲೋಕೇಶ್, ನಟಿ ಅನುಶ್ರೀ, ನಿರ್ದೇಶಕ ಆಕಾಶ್ ಶ್ರೀವತ್ಸ, ಚಿತ್ರನಟ ನಿರ್ದೇಶಕ ವಿಕ್ರಂ ಸೂರಿ, ನಟಿ ಸುಧಾರಣಿ, ಹಿರಿಯ ನಟ ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್ , ಉಮಾಶ್ರೀ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಂತಿಮ ದರ್ಶನ ಮಾಡಿ ನಟನಿಗೆ ಧೈರ್ಯ ತುಂಬಿದರು.ಮಾಜಿ ಸಚಿವ ಎಚ್ ಡಿ ರೇವಣ್ಣ ಆಪ್ತ JDS ಮುಖಂಡ ಕೃಷ್ಣೇಗೌಡ ಬರ್ಬರ ಕೊಲೆ

ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಸಿಟಿ ರವಿ, ಯುಟಿ ಖಾದರ್, ಶರವಣ, ಜಿ ಪರಮೇಶ್ವರ್, ಬಿಸಿ ಪಾಟೀಲ್ ಸೇರಿ ಸಾಕಷ್ಟು ರಾಜಕಾರಣಿಗಳು ಡಿಕೆ ಶಿವರಾಂ ಹಾಗು ವಿಜಯ್ ರಾಘವೇಂದ್ರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Share This Article
Leave a comment