July 7, 2022

Newsnap Kannada

The World at your finger tips!

Puroshothma kanagal

ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್ ಹೃದಯಾಘಾತದಿಂದ ನಿಧನ

Spread the love

ಕನ್ನಡ ಚಿತ್ರರಂಗದ ಚಿತ್ರ ಬ್ರಹ್ಮ ಅಂತಾನೇ ಕರೆಯಿಸಿಕೊಂಡಿರುವ ಪುಟ್ಟಣ್ಣ ಕಣಗಾಲ್ ಅಣ್ಣನ ಮಗ, ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್, ಇಂದು ಅಮೆರಿಕಾದ ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ.

ಇದನ್ನು ಓದಿ –

ಪುರುಷೋತ್ತಮ ಕಣಗಾಲ್ ಅವರಿಗೆ 69 ವಯಸ್ಸಾಗಿತ್ತು. ಪುರುಷೋತ್ತಮ ಕಣಗಾಲ್, ಹೆಸರಾಂತ ಸಾಹಿತಿಯಾಗಿರುವ ಪುರುಷೋತ್ತಮ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪುತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣನ ಮಗ ಪುರುಷೋತ್ತಮ ಕಣಗಾಲ್ ಅವರು ಕನ್ನಡದ ಸಾಕಷ್ಟು ಚಿತ್ರಗಳಿಗೆ ಗೀತ ರಚನೆ ಮಾಡಿದ್ದಾರೆ.

ಪುಟ್ಟಣ್ಣ ಕಣಗಾಲ್ ಟ್ರಸ್ಟ್​ನ ಮುಖ್ಯಸ್ಥರಾಗಿ ಪುರುಷೋತ್ತಮ ಕಣಗಾಲ್ ಕಾರ್ಯ ನಿರ್ವಹಿಸಿದ್ದರು. ಮಗ ಹಾಗೂ ಮಗಳನ್ನು ಬಿಟ್ಟು ಪುರುಷೋತ್ತಮ ಕಣಗಾಲ್ ಅಗಲಿದ್ದಾರೆ. ಸದ್ಯ ಮಗಳ ಜೊತೆ ನೆಲೆಸಿರುವ ಪುರುಷೋತ್ತಮ ಕಣಗಾಲ್ ಅಂತ್ಯ ಸಂಸ್ಕಾರ ಅಮೆರಿಕದಲ್ಲಿಯೇ ಮಾಡಲು ಕುಟುಂಬ ವರ್ಗ ನಿರ್ಧರಿಸಿದೆ.

error: Content is protected !!