December 22, 2024

Newsnap Kannada

The World at your finger tips!

vidhana soudha

ಭ್ರೂಣ ಹತ್ಯೆ ಪ್ರಕರಣ: ಮೈಸೂರಿನ ಹಿಂದಿನ ಡಿಎಚ್ ಓ , ಈಗಿನ ಟಿಎಚ್ ಓ ಸಸ್ಪೆಂಡ್

Spread the love

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮೈಸೂರು ಜಿಲ್ಲೆಯಲ್ಲಿ ನಡೆಸಿದ ಭ್ರೂಣ ಹತ್ಯೆ ಪ್ರಕರಣಕ್ಕೆ ಈಗ ಮೇಜರ್ ಟ್ವಿಸ್ಟ್ ಸಿಕ್ಕಿದೆ.

ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಮೈಸೂರು ಜಿಲ್ಲೆಯ ಈ ಹಿಂದಿನ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವಿ.ಪಿ ಹಾಗೂ ಮೈಸೂರು ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ.ಎಸ್ ಅವರನ್ನು ಆರೋಗ್ಯ ಇಲಾಖೆ ಅಮಾನತ್ತುಗೊಳಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್ ಈ ಆದೇಶ ಹೊರಡಿಸಿದ್ದು, ಪ್ರಸ್ತಾವನೆಯಲ್ಲಿ ಮೈಸೂರಿನಲ್ಲಿರುವ ಮಾತಾ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತದೆಯೆಂದು ವಿವಿಧ ಮುದ್ರಣ ಹಾಗೂ ಸಮೂಹ ಮಾದ್ಯಮಗಳಲ್ಲಿ ಬಿತ್ತರವಾಗಿರುವ ವರದಿಗಳಿಗೆ ಸಂಬಂಧಿಸಿದಂತೆ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಿಂದ ವರದಿಗಳನ್ನು ಪಡೆಯಲಾಗಿದೆ. ಭ್ರೂಣ ಹತ್ಯೆಯಲ್ಲಿ ಕೈವಾಡ ಶಂಕೆ – ಮಂಡ್ಯ ಮೂಲದ ವೈದ್ಯ ಕುಶಾಲನಗರದಲ್ಲಿ ಆತ್ಮಹತ್ಯೆ

ಈ ಪ್ರಕರಣದಲ್ಲಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994 (PCPNDT) ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಕಾಯ್ದೆ 2007(KPMEA)ಕಾಯ್ದೆಗಳನ್ವಯ ಡಾ|| ರವಿ ಪಿ., ಹಿಂದಿನ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ, ಮೈಸೂರು ಜಿಲ್ಲೆ ಹಾಗೂ ಡಾ|| ರಾಜೇಶ್ವರಿ ಎಸ್., ತಾಲ್ಲೂಕು ಆರೋಗ್ಯಾಧಿಕಾರಿ, ಮೈಸೂರು ತಾಲ್ಲೂಕು, ಇವರುಗಳು ಸರಿಯಾಗಿ ಕರ್ತವ್ಯವನ್ನು ನಿರ್ವಹಿಸದೇ ಹಾಗೂ ಗುಣಾತ್ಮಕ ಮೇಲ್ವಿಚಾರಣೆ ನಡೆಸದೇ ಕರ್ತವ್ಯಲೋಪವೆಸಗಿದ್ದಾರೆ

ಸದರಿ ವರದಿಗಳನ್ನು ಕೂಲಂಕುಶವಾಗಿ ಪರಿಶೀಲಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಮಾತಾ ಖಾಸಗಿ ಆಸ್ಪತ್ರೆ, ಮೈಸೂರು ಇಲ್ಲಿ ನಡೆಯುತ್ತಿದ್ದರೂ ಡಾ|| ರವಿ ಪಿ., ಇವರು ದಿನಾಂಕ 01-09-2020 ರಿಂದ 11-08-2023 ರವರೆಗೆ ಮೈಸೂರು ಜಿಲ್ಲೆಯ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಖಾಸಗಿ ಸಂಸ್ಥೆಗಳ ಮೇಲ್ವಿಚಾರಣೆ ಮಾಡಿ, Online Portal-ರಲ್ಲಿ ಪರಿಶೀಲನಾ ಅಂಶಗಳನ್ನು ಅಂತರಜಾಲ ಪುಟದಲ್ಲಿ ದಾಖಲಿಸಲು Log in Credentials, ಬಳಕೆದಾರರ ಸಂಕೇತಗಳನ್ನು ನೀಡಿರುವುದಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ಲಿಖಿತ ರೂಪದಲ್ಲಿ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಈ ಹಿಂದೆ ಇದೇ ಕಛೇರಿಯಲ್ಲಿ ಕೆ.ಪಿ.ಎಂ.ಇ ಮತ್ತು ಪಿ.ಸಿ.ಡಿಪಿ.ಎನ್.ಡಿ.ಟಿ ಕಾರ್ಯಕ್ರಮ ಅನುಷ್ಟಾನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕೆ.ಪಿ.ಎಂ.ಇ ಮತ್ತು ಪಿ.ಸಿ.ಪಿ.ಎನ್.ಡಿ.ಟಿ ನಿಯಮಗಳ ಜಾರಿಗೊಳಿಸುವಲ್ಲಿ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದಿದ್ದಾರೆ.

ಡಾ|| ರಾಜೇಶ್ವರಿ ಎಸ್. ತಾಲ್ಲೂಕು ಆರೋಗ್ಯಾಧಿಕಾರಿ, ಮೈಸೂರು ತಾಲ್ಲೂಕು, ಇವರು ಖಾಸಗಿ ಆಸ್ಪತ್ರೆಯು ಕೆ.ಪಿ.ಎಂ.ಇ.ಎ ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಬಗ್ಗೆ ಪರಿಶೀಲಿಸದೇ ಕಾಯ್ದೆಯನ್ನು ಸರಿಯಾಗಿ ಮೇಲ್ವಿಚಾರಣೆ ಮಾಡದೆ ಇಂತಹ ಪ್ರಕರಣ ನಡೆಯಲು ಅವಕಾಶ ನೀಡಿರುವುದು ಮತ್ತು ಮಾಧ್ಯಮದಲ್ಲಿ ಬಿತ್ತರವಾದ ಕಟ್ಟಡಕ್ಕೆ ದಿನಾಂಕ 22-06-2023 ಎಂದು ಹಳೆಯ ದಿನಾಂಕವನ್ನು ನಮೂದಿಸಿ ಇತ್ತೀಚೆಗೆ ನೋಟಿಸನ್ನು ಅಂಟಿಸಿದ್ದು ಈ ಬಗ್ಗೆ ಮಾದ್ಯಮದಲ್ಲಿ ಪ್ರಸಾರವಾಗಿ ಇಲಾಖೆಗೆ ಮುಜುಗರವನ್ನುಂಟು ಮಾಡಿರುತ್ತಾರೆ. ಪ್ರಕರಣ ನಡೆದ ಸ್ಥಳಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ರಾಜ್ಯದ ಸಕ್ಷಮ ಪ್ರಾಧಿಕಾರಿಗಳು ಹಾಗೂ ಉಪ ನಿರ್ದೇಶಕರು(ವೈದ್ಯಕೀಯ-2), ಮೈಸೂರು ಜಿಲ್ಲಾಧಿಕಾರಿಗಳು, ಮೈಸೂರು ಪೊಲೀಸ್‌ ಆಯುಕ್ತರು, ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಮೈಸೂರು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಖುದ್ದು ಪರಿಶೀಲಿಸಿದಾಗ ಅನುಷ್ಠಾನಾಧಿಕಾರಿಗಳ ಕರ್ತವ್ಯಲೋಪ ಹಾಗೂ ಗುಣಾತ್ಮಕ ಮೇಲ್ವಿಚಾರಣೆ ನಡೆಸದಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ತಿಳಿಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆಯು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು ಜಿಲ್ಲೆಯಲ್ಲಿ ಭ್ರೂಣ ಹತ್ಯೆ ನಡೆದಿರುವ ಬಗ್ಗೆ ವಿವಿಧ ಮುದ್ರಣ ಹಾಗೂ ಸಮೂಹ ಮಾದ್ಯಮಗಳಲ್ಲಿ ಬಿತ್ತರವಾಗಿರುವುದರಿಂದ ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ಋಣಾತ್ಮಕ ಅಭಿಪ್ರಾಯವುಂಟಾಗಿರುತ್ತದೆ. ಹೆಣ್ಣು ಭ್ರೂಣ ಹತ್ಯೆಯು ಸಾಮಾಜಿಕ ಹಾಗೂ ನೈತಿಕ ಅಪರಾಧವಾಗಿದ್ದು ಇದನ್ನು ತಡೆಯಲು ಇಲಾಖೆಯು ಗರ್ಭಧಾರಣಾ ಪೂರ್ವ ಮತ್ತು ಪಸವಪೂರ್ವ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ ಕಾಯ್ದೆ 1994 (PCPNDT) ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಕಾಯ್ದೆ 2007(KPMEA)ಕಾಯ್ದೆಗಳನ್ನು ಜಾರಿಗೆ ತಂದು ಕಠಿಣವಾಗಿ ಅನುಷ್ಟಾನಗೊಳಿಸಲು ಸಾಕಷ್ಟು ಬಾರಿ ಸಭೆ ನಡೆಸಿ ಸುತ್ತೋಲೆ ಹೊರಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ. ಆದಾಗ್ಯೂ, ಈ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೆ ಭ್ರೂಣ ಹತ್ಯೆಯನ್ನು ತಡೆಯಲು ವಿಫಲರಾಗಿ ಸರ್ಕಾರಿ ವೈದ್ಯಾಧಿಕಾರಿಗಳಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿ ಕರ್ತವ್ಯಲೋಪ ಎಸಗಿರುತ್ತಾರೆ. ಇವರುಗಳ ವಿರುದ್ಧದ ಕರ್ತವ್ಯಲೋಪವನ್ನು ಗಂಭೀರವಾಗಿ ಪರಿಗಣಿಸಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಇವರುಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಲು ತೀರ್ಮಾನಿಸಿದೆ ಹಾಗೂ ಡಾ|| ರಾಜೇಶ್ವರಿ ಎಸ್., ಇವರುಗಳು ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯುವ ಸಲುವಾಗಿ ಲೀನ್ ಅನ್ನು ಜಿಲ್ಲಾ ಆಸ್ಪತ್ರೆ ರಾಮನಗರ_ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವೈದ್ಯರುಗಳು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲವೆಂದು ಆದೇಶಿಸಿದ್ದಾರೆ.

ಭ್ರೂಣ ಹತ್ಯೆ ಪ್ರಕರಣ: ಮೈಸೂರಿನ ಹಿಂದಿನ ಡಿಎಚ್ ಓ , ಈಗಿನ ಟಿಎಚ್ ಓ ಸಸ್ಪೆಂಡ್ – Feticide case: Former DHO of Mysore, current THO suspended

WhatsApp Image 2023 06 20 at 3.31.03 PM
Copyright © All rights reserved Newsnap | Newsever by AF themes.
error: Content is protected !!